ಕರ್ನಾಟಕ

karnataka

ETV Bharat / bharat

ಕೊರೊನಾ ಭೀತಿಗೆ ದೇವಾಲಯಗಳು ಬಂದ್​​: ಗೇಟ್​​ ಹೊರಗೆ ಭಕ್ತರಿಂದ ಪ್ರಾರ್ಥನೆ - ಗೇಟ್​​ ಹೊರಗೆ ಜನರ ಪೂಜೆ

ದೇಶದಲ್ಲಿ ಕೊರೊನಾ ವೈರಸ್​​ ಹರಡುವಿಕೆ ಹೆಚ್ಚಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈರಸ್​​ ಹರಡದಂತೆ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆ ಬಹುತೇಕ ದೇವಾಲಯಗಳು ಬಂದ್​ ಆಗಿದ್ದು, ಜನರು ದೇವಾಲಯದ ಹೊರಗೆ, ಗೇಟ್​​ ಬಳಿ ನಿಂತು ದೇವರಿಗೆ ಕೈಮುಗಿಯುತ್ತಿದ್ದಾರೆ.

temples closed due to corona virus
ದೇವಾಲಯಗಳು ಬಂದ್

By

Published : Mar 21, 2020, 11:37 AM IST

ನವದೆಹಲಿ: ಕೊವಿಡ್​​-19 ಹರಡುವಿಕೆ ಭೀತಿ ಹಿನ್ನೆಲೆ ದೇಶದ ಹಲವೆಡೆ ದೇವಾಲಯಗಳಿಗೆ ಜನರ ಪ್ರವೇಶ ನಿರ್ಬಂಧಿಸಲಾಗಿದೆ.

ಕೊರೊನಾ ಭೀತಿಗೆ ದೇವಾಲಯಗಳು ಬಂದ್

ದೇಶದಲ್ಲಿ ಕೊರೊನಾ ವೈರಸ್​​ ಹರಡುವಿಕೆ ಹೆಚ್ಚಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈರಸ್​​ ಹರಡದಂತೆ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಹಿನ್ನೆಲೆ ಬಹುತೇಕ ದೇವಾಲಯಗಳು ಬಂದ್​ ಆಗಿದ್ದು, ಜನರು ದೇವಾಲಯದ ಹೊರಗೆ, ಗೇಟ್​​ ಬಳಿ ನಿಂತು ದೇವರಿಗೆ ಕೈಮುಗಿಯುತ್ತಿದ್ದಾರೆ.

ಪ್ರಮುಖ ಪ್ರವಾಸಿ ಸ್ಥಳಗಳು, ಐತಿಹಾಸಿಕ ದೇವಾಲಯಗಳ ಬಾಗಿಲು ಹಾಕಲಾಗಿದೆ. ಕೆಲವು ದೇವಾಲಯಗಳಲ್ಲಿ ಎಂದಿನಂತೆ ಪೂಜೆ ನಡೆಯುತ್ತಿದ್ದು, ಜನರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಮಹಾರಾಷ್ಟ್ರದ ಶಿರಡಿ ಶ್ರೀ ಸಾಯಿಬಾಬಾ ದೇವಸ್ಥಾನ, ತಿರುಪತಿ ತಿಮ್ಮಪ್ಪ ದೇವಾಲಯ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಜಮ್ಮುವಿನ ವೈಷ್ಣೋದೇವಿ ದೇವಾಲಯಗಳು ಕೂಡ ಬಂದ್​​ ಆಗಿದೆ.

ABOUT THE AUTHOR

...view details