ಪ್ರಯಾಗ್ರಾಜ್( ಉತ್ತರಪ್ರದೇಶ):ದಿನದಿಂದ ದಿನಕ್ಕೆ ಭಾರತದಲ್ಲಿ ತಾಪಮಾನ ಏರಿಕೆ ಆಗುತ್ತಿದೆ. ಮಲೆನಾಡು, ದಟ್ಯಾರಣ್ಯಗಳ ನಡುವೆ ಇರುವ ಊರುಗಳಲ್ಲೂ ಈಗೀಗ ತಾಪಮಾನ 35 ರ ಆಸುಪಾಸು ತಲುಪಿದೆ. ಇನ್ನು ಎಲ್ಲವೂ ಅತಿಯಾಗಿರುವ ಉತ್ತರ ಭಾರತದಲ್ಲಿ ನಿತ್ಯವೂ ಸೂರ್ಯನ ಪ್ರಖರತೆ ವಿಪರೀತಕ್ಕೆ ತಲುಪುತ್ತಿದೆ.
ಚುನಾವಣಾ ಕಾವು - ಬಿಸಿಲ ಝಳಕ್ಕೆ ಸಿಲುಕಿ ಹೈರಾಣಾದ ಜನ... 45 ಡಿಗ್ರಿ ತಲುಪಿದ ತಾಪಮಾನ - undefined
ಉತ್ತರ ಪ್ರದೇಶದಲ್ಲಿ ಈಗ ಚುನಾವಣೆ ಅಬ್ಬರ ಜತೆಗೆ ಸೂರ್ಯನ ಕಿರಣಗಳ ಪ್ರಖರತೆ ಹೊಡೆತ. ಧಗಧಗಿಸುವ ಬಿಸಿಲಿಗೆ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಇನ್ನು ನದಿಯ ಪಕ್ಕದಲ್ಲೇ ಇರುವ ಪ್ರಯಾಗ್ ರಾಜ್( ಅಲಹಾಬಾದ್) ನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ಅಂದ ಹಾಗೆ ಉತ್ತರ ಪ್ರದೇಶದಲ್ಲಿ ಈಗ ಚುನಾವಣೆ ಅಬ್ಬರ ಜತೆಗೆ ಸೂರ್ಯನ ಕಿರಣಗಳ ಪ್ರಖರತೆ ಹೊಡೆತ. ಧಗಧಗಿಸುವ ಬಿಸಿಲಿಗೆ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಇನ್ನು ನದಿಯ ಪಕ್ಕದಲ್ಲೇ ಇರುವ ಪ್ರಯಾಗ್ ರಾಜ್( ಅಲಹಾಬಾದ್) ನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇಲ್ಲಿನ ಜನ ಮುಖ ಹಾಗೂ ತಲೆಗೆ ರಕ್ಷಣೆ ಮಾಡಿಕೊಂಡೇ ಹೊರ ಬರಬೇಕಾದ ಪರಿಸ್ಥಿತಿ ತಲೆದೋರಿದೆ. ಪ್ರಯಾಗ್ ರಾಜ್ನಲ್ಲಿ ಇಂದು 45 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ಇದು ಪ್ರಯಾಗ್ ರಾಜ್ ಕಥೆಯಾದ್ರೆ ನಮ್ಮದೇ ರಾಜ್ಯದ ಕಲಬುರಗಿ, ರಾಯಚೂರುಗಳಲ್ಲಿ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಹೀಗಾಗಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಜನ ಮನೆಯಿಂದ ಮಧ್ಯಾಹ್ನ ಹೊರ ಬರಲು ಕಷ್ಟಪಡಬೇಕಾದ ಪರಿಸ್ಥಿತಿ ಇದೆ.