ಮಹಾರಾಷ್ಟ್ರ:ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಎಲ್ಲರಿಗೂ ಸಾಮಾನ್ಯ ಎಂಬಂತಾಗಿದೆ. ಇದರಿಂದ ಹೊರ ಬರಲು ಜನರು ಪರದಾಡುತ್ತಿರುತ್ತಾರೆ. ಆದ್ದರಿಂದ ಜನರಿಗೆ ಮಾನಸಿಕ ನೆಮ್ಮದಿ ನೀಡಲು ಮಹಾರಾಷ್ಟ್ರ ರಾಜ್ಯದ ಪುಣೆಯ ಪಿಂಪ್ರಿಯಲ್ಲಿ, ಯುವಕನೊಬ್ಬ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾನೆ. ಆತನ ಹೆಸರೇ ರಾಜ್ ಡಗವಾರ್.
ಆ ಯುವಕನ ಕೈಯಲ್ಲಿ ಒಂದು ಫಲಕವಿದೆ. ಅದರಲ್ಲಿ 'ನಿಮ್ಮ ಕಥೆಯನ್ನು ಹೇಳಿ, ನಾನು ನಿಮಗೆ 10 ರೂಪಾಯಿ ಕೊಡುತ್ತೇನೆ' ಎಂದು ಬರೆಯಲಾಗಿದೆ. ವೃತ್ತಿಯಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿರುವ ರಾಜ್, ಮಾನಸಿಕ ಒತ್ತಡದ ಸಮಸ್ಯೆಗಳನ್ನು ಅರಿತುಕೊಳ್ಳುತ್ತಾನೆ. ಆದ್ದರಿಂದ ಒತ್ತಡವನ್ನು ಎದುರಿಸುತ್ತಿರುವ ಜನರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾನೆ.
ಜನರ ಒತ್ತಡ ಕಡಿಮೆ ಮಾಡಲು ಪುಣೆ ಯುವಕನ ವಿನೂತನ ಕಾರ್ಯ ಇಂದಿನ ಜೀವನ ಶೈಲಿಯಲ್ಲಿ ಬಹುತೇಕ ಜನರಿಗೆ ಬಿಡುವು ಇರುವುದಿಲ್ಲ. ಇದರಿಂದಾಗಿ ಅವರು ಸಂವಹನದ ಕೊರತೆಯನ್ನು ಎದುರಿಸುತ್ತಾರೆ. ಮಾನಸಿಕ ಸಮಸ್ಯೆಯು ಅವರನ್ನು ಕಾಡುತ್ತಿರುತ್ತದೆ. ಆದ್ದರಿಂದ ರಾಜ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರ ಬಳಿ ಅನೇಕರು ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ. ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಇನ್ನು ರಾಜ್ ಅವರ ಪೋಷಕರು ಮಗನ ಈ ಕಾರ್ಯದ ಬಗ್ಗೆ ಹೆಮ್ಮೆ ಪಡುತ್ತಾರೆ. ತಮ್ಮ ಮಗನ ಯೋಚನೆಗೆ ಅವರ ಇಡೀ ಕುಟುಂಬ ಸಂತಸ ಪಡುತ್ತಿದೆ. ಜೀವನದಲ್ಲಿ ಮನಃಶಾಂತಿ ತುಂಬಾನೇ ಮುಖ್ಯ. ಮನಸ್ಸಿನ ಶಾಂತಿ ಪಡೆಯಲು ನಗುನಗುತ್ತಾ ಇರುವುದು ಬಹಳ ಮುಖ್ಯ. ರಾಜ್ನ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.