ಕರ್ನಾಟಕ

karnataka

ETV Bharat / bharat

ಟೆಲಿಗ್ರಾಮ್​ ಗ್ರಾಹರಿಗೆ ಗುಡ್​ ನ್ಯೂಸ್​... ಈ ವರ್ಷದ ವೇಳೆಗೆ ಗ್ರೂಫ್​ ವಿಡಿಯೋ ಕಾಲ್​ ಸೌಲಭ್ಯ - ಟೆಲಿಗ್ರಾಮ್ ಚರ್ಚಾ ಬಟನ್​​

ಇತ್ತೀಚಿನ ದಿನಗಳಲ್ಲಿ ವಿಡಿಯೋ ಕರೆಗಳು ಹೆಚ್ಚಾಗುತ್ತಿರುವುದರಿಂದ, ಟೆಲಿಗ್ರಾಮ್ ಕೂಡ ಇತರ ಆ್ಯಪ್​ಗಳಂತೆ ಗುಂಪು ವಿಡಿಯೋ ಕರೆ ಸೇವೆಯನ್ನು ಅಭಿವೃದ್ಧಿ ಪಡಿಸಿ ತನ್ನ ಗ್ರಾಹಕರಿಗೆ ನೀಡಲಿದೆ.

Telegram to bring secure group video calls this year
ಟೆಲಿಗ್ರಾಮ್​ನಿಂದ ಜನತೆಗೆ ಹೊಸ ಸೇವೆ!

By

Published : Apr 27, 2020, 2:04 PM IST

ಟೆಲಿಗ್ರಾಮ್ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗ ಟೆಲಿಗ್ರಾಮ್​ಗೆ ಎಲ್ಲರೂ ಮೊರೆ ಹೋಗುತ್ತಿದ್ದಾರೆ. ಈ ಹಿನ್ನೆಲೆ ಟೆಲಿಗ್ರಾಮ್​ನಲ್ಲಿ ನೂತನ ಸೇವೆಯನ್ನು ನೀಡಲು ಮುಂದಾಗಿದೆ.

ಈಗಾಗಲೇ ವಾಟ್ಸ್​ಆ್ಯಪ್​​, ಮೆಸೆಂಜರ್​, ಗೂಗಲ್​ ಡಿಯೋ ಎಲ್ಲವೂ ಗುಂಪು ವಿಡಿಯೋ ಕರೆಯ ಬಳಕೆಯನ್ನು ಗ್ರಾಹಕರಿಗೆ ನೀಡಿವೆ, ಆದರೆ, ಟೆಲಿಗ್ರಾಮ್​​ನಲ್ಲಿ ಈ ಸೌಲಭ್ಯ ಇರಲಿಲ್ಲ. ಈಗ ಗ್ರೂಫ್​ ವಿಡಿಯೋ ಸೇವೆಯನ್ನು ಈ ವರ್ಷದ ಅಂತ್ಯದಲ್ಲಿ ನೀಡಲು ಮುಂದಾಗಿದೆ. 2013 ರಲ್ಲಿನ ಮೆಸೇಜಿಂಗ್‌ನಂತೆಯೇ ಈ ವೀಡಿಯೊ ಕರೆಗಳನ್ನು ಮಾಡಲು ಈ ಆಪ್​ನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆದಾಗ್ಯೂ, ಟೆಲಿಗ್ರಾಮ್ ತನ್ನ ಮುಂಬರುವ ಸೇವೆಯ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ.

ಟೆಲಿಗ್ರಾಮ್ ಈಗ ವಿಶ್ವದಾದ್ಯಂತ 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಅಲ್ಲದೆ, 400,000,000 (40ಕೋಟಿ) ಮಾಸಿಕ ಬಳಕೆದಾರರನ್ನು ತಲುಪಿದೆ. ಇದು ಒಂದು ವರ್ಷದ ಹಿಂದೆ 300 ಮಿಲಿಯನ್ ಆಗಿತ್ತು ಎಂದು ಕಂಪನಿ ಮಾಹಿತಿ ನೀಡಿದೆ.

ಪ್ರತಿದಿನ ಕನಿಷ್ಠ 1.5 ಮಿಲಿಯನ್ ಹೊಸ ಬಳಕೆದಾರರು ಟೆಲಿಗ್ರಾಮ್‌ಗಾಗಿ ಸೈನ್ ಅಪ್ ಮಾಡುತ್ತಿದ್ದಾರಂತೆ. ಇದರಲ್ಲಿರುವ ವಿಶೇಷತೆಗಳಾದ ಫೋಲ್ಡರ್​​, ಕ್ಲೌಡ್ ಸ್ಟೋರೇಜ್ ಮತ್ತು ಡೆಸ್ಕ್‌ಟಾಪ್ ಬೆಂಬಲದಂತಹ ವೈಶಿಷ್ಟ್ಯಗಳು ಈ ಸಮಯದಲ್ಲಿ ಹೆಚ್ಚು ಸೂಕ್ತವಾಗಿವೆ. ಕಳೆದ ತಿಂಗಳು ಟೆಲಿಗ್ರಾಮ್ ಚರ್ಚಾ ಬಟನ್​​ ಪರಿಚಯಿಸಿತ್ತು.

ABOUT THE AUTHOR

...view details