ಕರ್ನಾಟಕ

karnataka

ETV Bharat / bharat

ಟೆಲಿಕಾಂ ಸಂಸ್ಥೆಗಳ ಪುನಶ್ಚೇತನ ಯೋಜನೆಗೆ ಬೇಕಿದೆ ಹೆಚ್ಚಿನ ಗಮನ!

ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ನಷ್ಟದಲ್ಲಿ ಮುಳುಗಿದ್ದು, ಸರ್ಕಾರ ಈ ಸಂಸ್ಥೆಗಳ ಪುನಶ್ಚೇತನ ಯೋಜನೆಗೆ ಬೇಕಿದೆ ಹೆಚ್ಚಿನ ಗಮನ ಹರಿಸಬೇಕಿದೆ.

BSNL and MTNL
ಟೆಲಿಕಾಂ ಸಂಸ್ಥೆಗಳ ಪುನಶ್ಚೇತನ ಯೋಜನೆಗೆ ಬೇಕಿದೆ ಹೆಚ್ಚಿನ ಗಮನ!

By

Published : Nov 27, 2019, 9:13 AM IST

ನವದೆಹಲಿ:ನಷ್ಟದಲ್ಲಿ ಮುಳುಗಿರುವ ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಮುಂದೆ ಕಠಿಣ ರಸ್ತೆಯನ್ನು ಎದುರು ನೋಡುತ್ತಿವೆ.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್ಎಲ್) ಗಳನ್ನು ವಿಲೀನಗೊಳಿಸುವ ನರೇಂದ್ರ ಮೋದಿ ಸರ್ಕಾರದ ಪ್ರಕಟಣೆ ಬಹಳ ತಡವಾಗಿ ಬಂದಿದೆ ಮತ್ತು ಇದು ಪ್ರಾಯಶಃ ಎರಡೂ ಕಂಪನಿಗಳನ್ನು ಅರ್ಥಪೂರ್ಣವಾಗಿ ಪುನರುಜ್ಜೀವನಗೊಳಿಸದಿರಬಹುದು. ಉದ್ಯಮ ತಜ್ಞರು ಉದ್ದೇಶಿತ ಕ್ರಮವು ಖಾಸಗಿ ಕಂಪನಿಗಳಿಗೆ ಕೆಲವು ಸ್ಪರ್ಧೆಯನ್ನು ಸೃಷ್ಟಿಸುತ್ತದೆ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಮಾತ್ರ ಉಳಿಸುತ್ತದೆ ಎಂಬ ಭಾವನೆಯನ್ನು ಹೊಂದಿದ್ದಾರೆ. ಸರ್ಕಾರವು ಬಹಳ ಹಿಂದೆಯೇ ಪ್ರಮುಖ ಸುಧಾರಣೆಗಳು ಮತ್ತು ತೀವ್ರ ಪುನಾರಚನೆಗೆ ಚಾಲನೆ ನೀಡಬಹುದಿತ್ತು. ಮತ್ತು ಸರ್ಕಾರವು ಘೋಷಿಸಿರುವ ಪ್ರಸ್ತುತ ಕ್ರಮಗಳು ಸಾರ್ವಜನಿಕ ವಲಯದ ಸಂಸ್ಥೆಗಳು ಪುನಃ ಹಳಿ ಹಿಡಿಯಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಡುತ್ತಿದ್ದಾರೆ. ಈ ಎರಡೂ ಟೆಲಿಫೋನ್ ಕಂಪನಿಗಳ ಕಾರ್ಯಾಚರಣೆಯ ವಿಭಾಗದಲ್ಲಿ ಸೋತು ಬಳಲುತ್ತಿವೆ. ವಿಲೀನವು ಉದ್ದೇಶಿತ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿ.ಆರ್.ಎಸ್) ಪ್ಯಾಕೇಜ್ ಜೊತೆಗೆ ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಆದರೆ, ಕುಸಿಯುತ್ತಿರುವ ಭವಿಷ್ಯ ಪುನರುಜ್ಜೀವನಗೊಳಿಸಲು ಇದು ಸಾಕಾಗುವುದಿಲ್ಲ.

ಒಂದು ಕಾಲದಲ್ಲಿ ನವರತ್ನ ಕಂಪನಿಯಾಗಿದ್ದ ಬಿಎಸ್‌ಎನ್‌ಎಲ್ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ನಂತಹ ಚುರುಕುಗತಿಯ ಮತ್ತು ಹೆಚ್ಚು ಪರಿಣಾಮಕಾರಿ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸುವಲ್ಲಿನ ಬಿಎಸ್‌ಎನ್‌ಎಲ್ ನ ಅಸಮರ್ಥತೆಯ ಪರಿಣಾಮವಾಗಿ ಒಟ್ಟು 90,000 ಕೋಟಿ ರೂ ನಷ್ಟಕ್ಕೆ ಒಳಗಾಯಿತು. 176,000 ರಷ್ಟು ದೊಡ್ಡ ಕಾರ್ಯಪಡೆಯನ್ನು ಬಿಎಸ್ಎನ್ಎಲ್ ಹೊಂದಿಯೂ ಅದು ಸರಳವಾಗಿ ಸ್ಪರ್ಧಾತ್ಮಕವಾಗಿಲ್ಲ. ಟೆಲಿಕಾಂ ವಲಯದ ತಜ್ಞರ ಪ್ರಕಾರ, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಎರಡರೊಂದಿಗಿನ ದೊಡ್ಡ ಸಮಸ್ಯೆಯೆಂದರೆ, 'ಏಕಸ್ವಾಮ್ಯ' ಯುಗಕ್ಕೆ ಸೇರಿದ ನೌಕರರು, ಇಂದಿನ ಅಲ್ಟ್ರಾ-ಸ್ಪರ್ಧಾತ್ಮಕ ವಾತಾವರಣಕ್ಕೆ ತಕ್ಕಂತೆ ನೌಕರರ ಮನಸ್ಥಿತಿಯನ್ನು ಬದಲಿಸುವಲ್ಲಿ ಆಡಳಿತ ವಿಫಲವಾಗಿದೆ. ಅವುಗಳ ಅವನತಿಗೆ ಇದು ಒಂದು ಪ್ರಮುಖ ಕಾರಣವಾದರೆ ಮೊಬೈಲ್ ವಿಭಾಗದಲ್ಲಿ ತೀವ್ರ ಸ್ಪರ್ಧೆಯಿಂದಾಗಿ ಕಡಿಮೆ ಟ್ಯಾರಿಫ್ ಹೆಚ್ಚಿನ ಸಿಬ್ಬಂದಿ ವೆಚ್ಚ ಮತ್ತು ಡೇಟಾ ಕೇಂದ್ರಿತ ಟೆಲಿಕಾಂ ಮಾರುಕಟ್ಟೆಯಲ್ಲಿ 4 ಜಿ ಸೇವೆಗಳ ಅನುಪಸ್ಥಿತಿ (ಕೆಲವು ಸ್ಥಳಗಳನ್ನು ಹೊರತುಪಡಿಸಿ) ಬಿಎಸ್ಎನ್ಎಲ್ ನ ನಷ್ಟಕ್ಕೆ ಇತರ ಪ್ರಮುಖ ಕಾರಣಗಳಾಗಿವೆ. 2016 ರಲ್ಲಿ ಮಾರುಕಟ್ಟೆಗೆ ಆಕ್ರಮಣಕಾರಿಯಾಗಿ ರಿಲಯನ್ಸ್ ಜಿಯೋ ಪ್ರವೇಶಿಸಿದ ನಂತರ ಸಾರ್ವಜನಿಕ ವಲಯದ ಸಂಸ್ಥೆಯು ತನ್ನ ಆದಾಯದಲ್ಲಿ ಕುಸಿತ ಕಂಡಿದೆ. ರಿಲಯನ್ಸ್ ಜಿಯೋ ಟೆಲಿಕಾಂ ಉದ್ಯಮವನ್ನು ತನ್ನ ವಿಚ್ಛಿದ್ರಕಾರಕ ಬೆಲೆಯೊಂದಿಗೆ ಬೆಚ್ಚಿಬೀಳಿಸಿದೆ. ಇದು ಪ್ಯಾನ್-ಇಂಡಿಯಾ 4 ಜಿ ನೆಟ್‌ವರ್ಕ್ ಹೊಂದಿದೆ. 2016 ರ ಕೊನೆಯಲ್ಲಿ ಆರ್‌ಜಿಯೊ ಜೊತೆ 4 ಜಿ ಬಂದ ನಂತರ ಮೊಬೈಲ್ ಸಾಧನಗಳಲ್ಲಿನ ದತ್ತಾಂಶ ಬಳಕೆ ಗಣನೀಯವಾಗಿ ಏರಿಕೆಯಾಗಿದೆ. ಮೊಬೈಲ್‌ಗಳಲ್ಲಿನ ಡೇಟಾ ಬಳಕೆ ಗಣನೀಯವಾಗಿ ಬೆಳೆದಿದ್ದರೂ ಆರ್‌ಜಿಯೊ ಪ್ರಾರಂಭವಾದ ನಂತರ ಅಧಿಕಾರಸ್ಥರ ಆರ್ಥಿಕತೆಯ ಹೊಡೆತಕ್ಕೆ ಕಾರಣವಾಯಿತು, ಇದು ಸಹ ಟೆಲಿಕಾಂ ವಲಯದ ಏಕೀಕರಣಕ್ಕೆ ಕಾರಣವಾಯಿತು. ಈಗ, ಬಿಎಸ್ಎನ್ಎಲ್ / ಎಂಟಿಎನ್ಎಲ್ ಹೊರತುಪಡಿಸಿ ಏರ್ಟೆಲ್, ವೊಡಾಫೋನ್ ಐಡಿಯಾ (ವಿಲೀನದ ನಂತರ) ಕೇವಲ ಮೂರು ಖಾಸಗಿ ಕಂಪನಿಗಳು ಮಾತ್ರ ಉಳಿದಿವೆ. ಈ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಗಳಿಗೆ ನಿಲ್ಲುವಂತೆ ಮಾಡುವ ಪುನರುಜ್ಜೀವನ ಪ್ಯಾಕೇಜ್‌ನಲ್ಲಿ, ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಅನ್ನು ವಿಲೀನಗೊಳಿಸುವುದಾಗಿ ಘೋಷಿಸುವುದರ ಜೊತೆಗೆ, ಸವರನ್ ಬಾಂಡ್‌ಗಳ ಮೂಲಕ 15,000 ಕೋಟಿ ರೂ.ಗಳನ್ನು ಸಂಗ್ರಹಿಸಲು ಸರ್ಕಾರ ಬಯಸಿದೆ, 38,000 ಕೋಟಿ ರೂ ಆಸ್ತಿಯನ್ನು ವಿಲೀನಗೊಳಿಸುವುದರ ಜೊತೆಗೆ. ಮುಂದಿನ ನಾಲ್ಕು ವರ್ಷಗಳಲ್ಲಿ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿ.ಆರ್.ಎಸ್.) ನೀಡಲು ಯೋಚಿಸಿದೆ.

ಸ್ಥೂಲ ದೃಷ್ಟಿಕೋನದಲ್ಲಿ ನೋಡುವುದಾದರೆ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ವಿಲೀನವು ತಾರ್ಕಿಕವಾಗಿದೆ. ಏಕೆಂದರೆ ಇವೆರಡೂ ಯಾರೂ ಅತಿಕ್ರಮಿಸದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಎಲ್ಲಾ ಪ್ರಮುಖ ಖಾಸಗಿ ಟೆಲಿಕಾಂ ಆಪರೇಟರುಗಳು ಮೊಬೈಲ್ ಸೇವೆಗಳಿಗೆ ಪ್ಯಾನ್-ಇಂಡಿಯಾ ಉಪಸ್ಥಿತಿಯನ್ನು ಹೊಂದಿರುವುದರಿಂದ, ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ ವಿಲೀನ ಅರ್ಥಪೂರ್ಣವಾಗಿದೆ. ಈ ಪಿಎಸ್‌ಯು ಸ್ಪರ್ಧೆಯನ್ನು ಹೊಂದಲು ಕಾರ್ಯಸಾಧ್ಯವಾದ ಪ್ರತಿ ಸಮತೋಲನವನ್ನು ನೀಡುತ್ತದೆ. ಖಾಸಗಿ ನಿರ್ವಾಹಕರ ಹೆಚ್ಚು ಹತೋಟಿ ಹೊಂದಿರುವ ಬ್ಯಾಲೆನ್ಸ್ ಶೀಟ್‌ಗಳು ಈಗಾಗಲೇ ಮುಂದಿನ ತಲೆಮಾರಿನ ದತ್ತಾಂಶ ಜಾಲಗಳನ್ನು ದೇಶದ ಗ್ರಾಮೀಣ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ ಪ್ರದೇಶಗಳಿಗೆ ನಿಧಾನಗೊಳಿಸಲು ಒತ್ತಾಯಿಸುತ್ತಿವೆ. ಬಲವಾದ ಪಿ.ಎಸ್.ಯು ಹೊಂದಿರುವುದು ಖಾಸಗಿ ನಿರ್ವಾಹಕರು ಆರ್ಥಿಕ ಒತ್ತಡದಿಂದ ಹೊರಬರಲು ಸುಲಭವಾದ ಮಾರ್ಗವಾಗಿ ಬಾಡಿಗೆಗಳಳನ್ನು (ಟ್ಯಾರಿಫ್) ಹೆಚ್ಚಿಸುವುದನ್ನು ತಡೆಯುವುದು ಮಾತ್ರವಲ್ಲದೆ ಗ್ರಾಮೀಣ ಗ್ರಾಹಕರಿಗೂ ಸೇವೆ ಪೂರೈಸುತ್ತದೆ.

ಬಿಎಸ್ಎನ್ಎಲ್ ಉಪಸ್ಥಿತಿಯಲ್ಲಿ ರಾಷ್ಟ್ರದ ಕಾರ್ಯತಂತ್ರದ ಹಿತಾಸಕ್ತಿಯಿದೆ. ದೇಶಾದ್ಯಂತ ಕಾರ್ಯತಂತ್ರದ ಸಂಸ್ಥೆಗಳು ಮತ್ತು ಪ್ರದೇಶಗಳನ್ನು ಸಂಪರ್ಕಿಸುವಲ್ಲಿ ಬಿಎಸ್‌ಎನ್‌ಎಲ್ ಪ್ರಮುಖ ಪಾತ್ರ ವಹಿಸುತ್ತದೆ ಈ ಕಾರಣಕ್ಕಾಗಿ ಅವುಗಳ ಅಸ್ತಿತ್ವದ ಅಗತ್ಯವಿದೆ. ರಾಷ್ಟ್ರೀಯ ಭದ್ರತೆಯ ವಿಷಯ ಬಂದಾಗ ಸಂವಹನ ಜಾಲವು ಒಂದು ಪ್ರಮುಖ ಅಂಶವಾಗಿದೆ. ಈ ಕಾರ್ಯವನ್ನು ಯಾವುದೇ ಖಾಸಗಿ ಆಪರೇಟರ್‌ಗಳಿಗೆ ನೀಡಲು ಸಾಧ್ಯವಿಲ್ಲ. ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಕೂಡ ರಾಷ್ಟ್ರವು ಪ್ರವಾಹ, ಚಂಡಮಾರುತಗಳು ಮತ್ತು ಇತರ ತುರ್ತು ಪರಿಸ್ಥಿತಿಗಳಂತಹ ನೈಸರ್ಗಿಕ ವಿಕೋಪಗಳನ್ನು ಎದುರಿಸಿದಾಗಲೆಲ್ಲಾ ತ್ವರಿತ ಉಚಿತ ಸೇವೆಗಳನ್ನು ನೀಡಲು ಬಿಎಸ್‌ಎನ್‌ಎಲ್ ಸಂಸ್ಥೆ ಮೊದಲು ನಿಂತಿದೆ ಎಂದು ಹೇಳಿದ್ದಾರೆ. ಎಷ್ಟೋ ವಿಕೋಪದ ಸಂದರ್ಭಗಳಲ್ಲಿ ಇದೊಂದೇ ಸಂಸ್ಥೆ ನಿರ್ಣಾಯಕ ಸಂಸ್ಥೆಯಾಗಿ ಹೊರಹೊಮ್ಮಿದೆ.

ನ್ಯಾಷನಲ್ ಡಿಜಿಟಲ್ ಕಮ್ಯುನಿಕೇಷನ್ ಪಾಲಿಸಿ (ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ)

ಡಿಜಿಟಲ್ ಆರ್ಥಿಕತೆಯು ವಿಶಾಲವಾದ ಜಾಗವನ್ನು ಆಕ್ರಮಿಸುತ್ತಾ ಶೀಘ್ರವಾಗಿ ಬೆಳೆಯುತ್ತಿರುವ ಯುಗದಲ್ಲಿ ಭದ್ರ ಮತ್ತು ಸುರಕ್ಷಿತ ಹಣಕಾಸು ಕಾರ್ಯಾಚರಣೆಗಳಿಗಾಗಿ ಬಲವಾದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳನ್ನು ಹೊಂದುವ ಅವಶ್ಯಕತೆಯಿದೆ. 2018 ರಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ (ಎನ್‌ಡಿಸಿಪಿ) ಯಲ್ಲಿ ಸುಧಾರಿತ ಬ್ರಾಡ್‌ಬ್ಯಾಂಡ್ ವೇಗ, ಉತ್ತಮ ರೇಡಿಯೊ ಸ್ಪೆಕ್ಟ್ರಮ್ ನಿರ್ವಹಣೆ, ರಾಷ್ಟ್ರೀಯ ಟೆಲಿಕಾಂ ಮೂಲಸೌಕರ್ಯದ ಭದ್ರತೆ, ನೆಟ್ ನ್ಯೂಟ್ರಾಲಿಟಿ ತತ್ವಗಳ ಅನುಸರಣೆ ಮುಂತಾದ ಡಿಜಿಟಲ್ ಆರ್ಥಿಕತೆಯ ಕೆಲವು ಪ್ರಮುಖ ಅಂಶಗಳನ್ನು ದೂರಸಂಪರ್ಕ ಇಲಾಖೆ ಗುರುತಿಸಿದೆ. ಡಿಜಿಟಲ್ ಯುಗದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ವಿಧಾನದಲ್ಲಿ ಎನ್‌ಡಿಸಿಪಿ ಮೂರು ಪ್ರಮುಖ ಕ್ರಿಯಾ ಮಾರ್ಗಗಳನ್ನು ವಿವರಿಸುತ್ತದೆ, ಅವುಗಳೆಂದರೆ `ಕನೆಕ್ಟ್ ಇಂಡಿಯಾ’, `ಪ್ರೊಪೆಲ್ ಇಂಡಿಯಾ’ ಮತ್ತು `ಸೆಕ್ಯೂರ್ ಇಂಡಿಯಾ '. ಕನೆಕ್ಟ್ ಇಂಡಿಯಾ ಬ್ರಾಡ್ಬ್ಯಾಂಡ್ ಅನ್ನು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸಾಧನವಾಗಿ ನೋಡುತ್ತದೆ, ಆದರೆ ಪ್ರೊಪೆಲ್ ಇಂಡಿಯಾ 5 ಜಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಬಿಗ್ ಡೇಟಾದಂತಹ ಹೊಸ ಡಿಜಿಟಲ್ ತಂತ್ರಜ್ಞಾನಗಳ ಶಕ್ತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಮತ್ತು ಅಂತಿಮವಾಗಿ, ಸೆಕ್ಯುರ್ ಇಂಡಿಯಾ ದೇಶದಲ್ಲಿ ಡಿಜಿಟಲ್ ಸಂವಹನದ ಸಾರ್ವಭೌಮತ್ವ, ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುಂದುವರಿಯುತ್ತದೆ.

ಬಲವಾದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳನ್ನು ಹೊಂದುವ ಮೂಲಕ ಮೇಲಿನ ಗುರಿಗಳನ್ನು ಭಾರತ 2022 ಇಸವಿಯೊಳಗೆ ಸಾಧಿಸುವ ಗುರಿ ಹೊಂದಿದೆ. ಆದರೆ ನಮ್ಮ ನೆರೆಯ ದೇಶ ಚೀನಾ ಈ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಡಿಜಿಟಲ್ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಚೀನಾದ ಟೆಲಿಕಾಂ ಸಂಸ್ಥೆಗಳು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಏಕಕಾಲಕ್ಕೆ ಅನೇಕ ಗುರಿಗಳನ್ನು ಪೂರೈಸುತ್ತಿವೆ. ಹೆಚ್ಚಿನ ದೇಶಗಳಲ್ಲಿ ಸರ್ಕಾರಗಳು ಟೆಲಿಕಾಂ ಮೂಲಸೌಕರ್ಯಗಳ ಮೇಲಿನ ಹಿಡಿತವನ್ನು ಬಿಟ್ಟುಕೊಟ್ಟು ಖಾಸಗಿ ಉದ್ಯಮಗಳಿಗೆ ಅವಕಾಶ ನೀಡಿದ್ದರೂ ಚೀನಾ ಇದಕ್ಕೆ ಹೊರತಾಗಿ ಉಳಿದಿದೆ. ಕಳೆದ ವರ್ಷದ ಕೊನೆಯಲ್ಲಿ ಚೀನಾದ 4 ಜಿ ಎಲ್ ಟಿಇ ಚಂದಾದಾರರ ಸಂಖ್ಯೆ ಒಂದು ಬಿಲಿಯನ್ ಮೀರಿಸಿದೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಚೀನಾ ಮೊಬೈಲ್, ಚೀನಾ ಟೆಲಿಕಾಂ ಮತ್ತು ಚೀನಾ ಯುನಿಕಾಮ್ ಕ್ರಮವಾಗಿ ಶೇ 65, 18 ಮತ್ತು 17 ರಷ್ಟು ಚಂದಾದಾರರನ್ನು ಹೊಂದಿವೆ . ಹೀಗಾಗಿ ವಿಶ್ವದ 4 ಜಿ ಚಂದಾದಾರರ ಪೈಕಿ ಶೇ 40 ಕ್ಕಿಂತ ಹೆಚ್ಚು ಪಾಲನ್ನು ಚೀನಾ ಹೊಂದಿದೆ.

ಭಾರತದ ವಿಷಯಕ್ಕೆ ಬರುವುದಾದರೆ ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಗಳ ಪಾಲು ವೈರ್‌ಲೆಸ್ ಚಂದಾದಾರರ ಮೂಲದಲ್ಲಿ ಕೇವಲ 10 ಶೇಕಡಾ ಮತ್ತು ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಚಂದಾದಾರರ ನೆಲೆಯಲ್ಲಿ ಶೇಕಡಾ 3 ರಷ್ಟಿದೆ. ಟ್ರಾಯ್ ಪ್ರಕಾರ ಮೇ 2019 ರ ಹೊತ್ತಿಗೆ ಬಿಎಸ್ಎನ್ಎಲ್ ಶೇ 9.98 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು ಇದು ಎಂಟಿಎನ್ಎಲ್ ಜೊತೆಗೂಡಿ ಶೇಕಡಾ 10.28 ಕ್ಕೆ ಏರಿದೆ. ಇದಕ್ಕೆ ವ್ಯತಿರಿಕ್ತವಾಗಿ ಖಾಸಗಿ ಆಪರೇಟರುಗಳು ಮಾರುಕಟ್ಟೆಯ ಬಹುಪಾಲು ಭಾಗವನ್ನು ಹೊಂದಿದ್ದಾರೆ. (ವೊಡಾಫೋನ್ ಮಾರುಕಟ್ಟೆ ಪಾಲು ಶೇ 33.36 ರಷ್ಟಿದ್ದರೆ, ಏರ್‌ಟೆಲ್ ಶೇ 27.58 ರಷ್ಟಿದೆ.) ಬಿಎಸ್‌ಎನ್‌ಎಲ್ ನವರತ್ನ ಸಂಸ್ಥೆಯಿಂದ ನಷ್ಟದಲ್ಲಿರುವ ಪಿಎಸ್‌ಯುಗಳ ಸ್ಥಾನಕ್ಕೆ ಕುಸಿದಿದೆ.

ಪುನಶ್ಚೇತನ ಯೋಜನೆಯಲ್ಲಿ 4 ಜಿ ಸ್ಪೆಕ್ಟ್ರಮ್ ಕಂಪೆನಿಗಳನ್ನು ಸ್ಪರ್ಧಾತ್ಮಕವಾಗಿಸುತ್ತದೆ ಎಂಬ ಭರವಸೆಯಲ್ಲಿ ಸರ್ಕಾರ ಅತಿಯಾದ ಆಶಾವಾದವನ್ನು ಕಾಣುತ್ತಿದೆ. ಆದರೆ ಬಿಎಸ್ಎನ್ಎಲ್ ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸಲು ಸಜ್ಜುಗೊಳ್ಳುತ್ತದೆಯೇ ಎಂಬುದು ಗಮನಿಸಬೇಕಾದ ನಿಜವಾದ ಸಮಸ್ಯೆ. 4 ಜಿ ಸ್ಪೆಕ್ಟ್ರಮ್ ಮಾತ್ರ ಗ್ರಾಹಕರಿಗೆ ಖಾತರಿ ನೀಡುವುದಿಲ್ಲ. ಗ್ರಾಹಕರು ಸುಲಭವಾದ ಆ್ಯಕ್ಸೆಸ್ ಮತ್ತು ಸ್ಪಂದಿಸುವಿಕೆಗೆ ಪ್ರತಿಕ್ರಿಯಿಸುತ್ತಾರೆ. ಸಾಮಾನ್ಯವಾಗಿ ಗ್ರಾಹಕರೊಂದಿಗೆ ವ್ಯವಹರಿಸುವ ಪಿ.ಎಸ್.ಯುಗಳು ಸಾಕಷ್ಟು ಹೆಣಗಾಡುತ್ತವೆ. ಇದಕ್ಕೆ ಕಾರಣ ಗ್ರಾಹಕರು ಸದಾ ಹೆಚ್ಚಿನದನ್ನು ಬಯಸುತ್ತಾರೆ ಮತ್ತು ಗ್ರಾಹಕರಿಗೆ ತಕ್ಷಣದ ಪ್ರತಿಕ್ರಿಯೆ ನೀಡಲು ಕಂಪನಿಯ ಪ್ರಕ್ರಿಯೆಗಳನ್ನು ಸಜ್ಜುಗೊಳಿಸುವುದು ಇದಕ್ಕೆ ಅಗತ್ಯವಾಗಿರುತ್ತದೆ. ಚಂದಾದಾರರು ತಮ್ಮ ವ್ಯವಹಾರವನ್ನು ಬೇರೆ ಕಂಪನಿಗಳಿಗೆ ಬದಲಾಯಿಸಲು ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ನ ಕಳಪೆ ಗ್ರಾಹಕ ಸೇವೆಯು ಒಂದು ದೊಡ್ಡ ಕಾರಣವಾಗಿದೆ.

ತೀವ್ರ ಸ್ಪರ್ಧೆಯಿರುವ ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯವಿರುವ ಸರಕಾರಿ ಟೆಲಿಕಾಂ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರವು ವಿಶ್ವಾಸಾರ್ಹ ಕ್ರಿಯಾ ಯೋಜನೆಯನ್ನು ರೂಪಿಸಬೇಕು. ಉದಾಹರಣೆಗೆ, ಪಿ.ಎಸ್.ಯು ಸ್ಪರ್ಧಾತ್ಮಕವಾಗಲು ಅದಕ್ಕೆ ಸ್ವಾಯತ್ತತೆಯ ಮಟ್ಟ ಬೇಕು. ಆದಾಗ್ಯೂ, ಬಹಳ ಸಮಯದಿಂದ ಸರ್ಕಾರವು ಸರ್ಕಾರಿ ಟೆಲಿಕಾಮ್ ಕಂಪನಿಗಳನ್ನು ವಸಾಹತುಗಳೆಂಬಂತೆ ಪರಿಗಣಿಸಿದೆ. ಹಳತಾದ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಅವರನ್ನು ನಿರಂತರವಾಗಿ ಒತ್ತಾಯಿಸಲಾಗಿದೆ ಮತ್ತು ಕಳಪೆ ಗುಣಮಟ್ಟದ ಸ್ಪೆಕ್ಟ್ರಮ್ಮನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದೆ. ಈ ರೀತಿಯ ಅಂಶಗಳು ಎರಡೂ ಕಂಪನಿಗಳ ಸ್ಥಿರ ಕುಸಿತಕ್ಕೆ ಕಾರಣವಾಗಿವೆ. ಪಾರುಗಾಣಿಸುವ ಯೋಜನೆಯೊಂದಿಗೆ ಟೆಲಿಕಾಮ್ ಕಂಪನಿಗಳ ಆಡಳಿತ ಸುಧಾರಣೆಯೂ ಸಹ ನಿರ್ಣಾಯಕ ಅಂಶವಾಗಿದೆ. ಕೆಲಸದ ವಾತಾವರಣವನ್ನು ಬದಲಾಯಿಸುವುದು ಮತ್ತು ಈ ಕಂಪನಿಗಳ ಪ್ರಕ್ರಿಯೆಗಳನ್ನು ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ತುಂಬಿಸುವುದನ್ನು ಮಾಡಬೇಕಿದೆ. ಕಷ್ಟಕರವಾದ ನಿರ್ಧಾರಗಳ ಮೂಲಕ ಸಾಗಲು ಸಾಕಷ್ಟು ದೃಢ ನಿಶ್ಚಯದ ಅಗತ್ಯವಿರುತ್ತದೆ. ಮಿನಿಮಮ್ ಗವರ್ನಮೆಂಟ್ ಮ್ಯಾಕ್ಸಿಮಮ್ ಗವರ್ನೆನ್ಸ್ ನ ವಚನವನ್ನು ಪಾಲಿಸಲು ತ್ಯಾಗ ಮಾಡಲು ಕಲಿಯಬೇಕಾಗಿದೆ. ಒಂದು ಕಡೆ ಆರ್ಥಿಕತೆಯು ನಿಧಾನಗತಿಯ ನಡುವಿನಲ್ಲಿರುವಾಗ ಎಲ್ಲಾ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಸಮಗ್ರ ವಿಧಾನದ ಕೊರತೆಯಿದ್ದರೆ ಈ ಹಂತದಲ್ಲಿ ಪುನಶ್ಚೇತನ ಯೋಜನೆಯು ಮತ್ತೊಂದು ವ್ಯರ್ಥ ಯೋಜನೆಯಾಗುವ ನಿಜವಾದ ಅಪಾಯವನ್ನುಂಟುಮಾಡಬಹುದು. ಎರಡು ಪಿಎಸ್‌ಯುಗಳ ಅನಿಶ್ಚಿತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರಸ್ತಾಪವು ಕನಿಷ್ಠ ನೌಕರರಿಗೆ ಹೆಚ್ಚು ಸ್ವೀಕಾರಾರ್ಹವಾಗಿ ಕಾಣುತ್ತದೆ. ಸುಧಾರಣೆ ಮತ್ತು ಪುನಶ್ಚೇತನವು ಈ ಸಮಯದಲ್ಲಿ ಆಗದಿದ್ದರೆ ಅದು ಎರಡು ಟೆಲಿಕಾಂ ಕಂಪನಿಗಳ ಅಂತ್ಯವಾಗಲು ಕಾರಣವಾಗಬಹುದು.

For All Latest Updates

ABOUT THE AUTHOR

...view details