ಕರ್ನಾಟಕ

karnataka

ETV Bharat / bharat

ಕೋವಿಡ್​ಗೆ ತೆಲಂಗಾಣದಲ್ಲಿ ಮಹಿಳಾ ಕೌನ್ಸಿಲರ್​ ಬಲಿ!

ಕೊರೊನಾದಿಂದ ಬಳಲುತ್ತಿದ್ದ ಸಂಗರೆಡ್ಡಿ ಪುರಸಭೆ ಕೌನ್ಸಿಲರ್ ಇಂದು ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Covid-19
ಕೋವಿಡ್

By

Published : Jul 6, 2020, 3:15 PM IST

ಹೈದರಾಬಾದ್​:ಕೊರೊನಾ ಸೋಂಕಿಗೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಮಹಿಳಾ ಕೌನ್ಸಿಲರ್​ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್​ನಿಂದ ಮೃತಪಟ್ಟ ಮೊದಲ ಜನಪ್ರತಿನಿಧಿ ಇವರಾಗಿದ್ದಾರೆ.

ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಸಂಗರೆಡ್ಡಿ ಪುರಸಭೆ ಕೌನ್ಸಿಲರ್​ರನ್ನು ಜೂನ್​ 30ರಂದು ಹೈದರಾಬಾದ್​ನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಜುಲೈ 3ರಂದು ಸೋಂಕು ತಗುಲಿರುವುದು ದೃಢವಾಗಿತ್ತು. ಇವರ ಸ್ಥಿತಿ ಗಂಭೀರವಾದ ಕಾರಣ ಗಾಂಧಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು. ಆದರೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಮೃತ ಕೌನ್ಸಿಲರ್ ಮಗನ ಕೋವಿಡ್​ ಪರೀಕ್ಷಾ ವರದಿಯೂ ಪಾಸಿಟಿವ್​ ಬಂದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಕುಟುಂಬದ 14 ಸದಸ್ಯರನ್ನು ಕ್ವಾರಂಟೈನ್​ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಈವರೆಗೆ 23,902 ಕೊರೊನಾ ಕೇಸ್​ಗಳು ಹಾಗೂ 295 ಸಾವು ವರದಿಯಾಗಿದೆ. ಗ್ರೇಟರ್​ ಹೈದರಾಬಾದ್ ಬಳಿಕ ಸಂಗರೆಡ್ಡಿ ಪಟ್ಟಣದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಸಂಗರೆಡ್ಡಿಯ ತಹಶೀಲ್ದಾರ್​ಗೆ ಕೂಡ ಸೋಂಕು ತಗುಲಿತ್ತು.

ABOUT THE AUTHOR

...view details