ಕರ್ನಾಟಕ

karnataka

ETV Bharat / bharat

ಬುಡಕಟ್ಟು ಜನಾಂಗದ ಬಾಲಕಿ ಮೇಲೆ ಐವರು ಕಾಮುಕರಿಂದ ಗ್ಯಾಂಗ್​ ರೇಪ್​ - ಬಡಕಟ್ಟು ಜನಾಂಗದ ಬಾಲಕಿ ಮೇಲೆ ಅತ್ಯಾಚಾರ

ತೆಲಂಗಾಣದ ಜಗ್ತಿಅಲ್​ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಬಾಲಕಿಯ ಮೇಲೆ ಐವರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Tribal girl raped by relative
ಬಡಕಟ್ಟು ಜನಾಂಗದ ಬಾಲಕಿ ಮೇಲೆ ಐವರಿಂದ ಅತ್ಯಾಚಾರ

By

Published : Oct 25, 2020, 7:20 AM IST

ಕರೀಂನಗರ (ತೆಲಂಗಾಣ): ತೆಲಂಗಾಣದ ಜಗ್ತಿಅಲ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಬಾಲಕಿವೋರ್ವಳ ಸಂಬಂಧಿ ಸೇರಿದಂತೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಐವರು, ಮೂರು ವಾರಗಳ ಹಿಂದೆ ಬಾಲಕಿಯನ್ನು ಮೆಟ್‌ಪಲ್ಲಿ ಪಟ್ಟಣದ ಹೊರವಲಯಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಷಯ ಬಹಿರಂಗವಾದರೆ ಕುಟುಂಬದ ಗೌರವ ಹಾಳಾಗುತ್ತೆ ಎಂಬ ಭಯದಿಂದ ಸಂತ್ರಸ್ತೆಯ ಸಹೋದರ ತಡವಾಗಿ ದೂರು ದಾಖಲಿಸಿದ್ದಾನೆ. ದೂರಿನ ಆಧಾರದ ಮೇಲೆ ತನಿಖೆ ಆರಂಭವಾಗಿದ್ದು, ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details