ಹೈದರಾಬಾದ್ (ತೆಲಂಗಾಣ): ಕಳೆದ ಕೆಲವು ದಿನಗಳಿಂದ ತೆಲಂಗಾಣದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿತ್ತಾದರೂ ನಿನ್ನೆ 22 ಹೊಸ ಪ್ರಕರಣ ಪತ್ತೆಯಾಗಿದ್ದು, 3 ಸೋಂಕಿತರು ಸಾವನ್ನಪ್ಪಿದ್ದಾರೆ.
ಕೋವಿಡ್-19ನಿಂದ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 44 ವರ್ಷದ ಮಹಿಳೆ, 48 ಮತ್ತು 76 ವರ್ಷದ ಪುರುಷರು ಮೃತಪಟ್ಟಿದ್ದು, ಮೂವರೂ ಹೈದರಾಬಾದ್ಗೆ ಸೇರಿದವರಾಗಿದ್ದಾರೆ.
ಇಬ್ಬರು ಸೋಂಕಿತ ವ್ಯಕ್ತಿಗಳಿಂದ ಕೊರೊನಾ ವೈರಸ್ ಹೈದರಾಬಾದ್‌ನ ಮಲಕ್‌ಪೇಟೆ ಗುಂಜ್ ಮಾರುಕಟ್ಟೆಯ ಮೂರು ಅಂಗಡಿಗಳ ಮಾಲೀಕರಿಗೆ ಹರಡಿ, ಬಳಿಕ ಅವರಿಂದ ಅವರ ಕುಟುಂಬ ಸದಸ್ಯರಿಗೆ ಸೋಂಕು ಹರಡಿದೆ. ಗುಂಜ್ ಪ್ರದೇಶವನ್ನ ನಿರ್ಬಂಧಿತ ವಲಯವನ್ನಾಗಿ ಘೋಷಿಸಲಾಗಿದೆ. ಗುರುವಾರ 33 ಕೋವಿಡ್-19 ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವ ಇ. ರಾಜೇಂದರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 28ಕ್ಕೆ ಏರಿದೆ. ಒಟ್ಟು ಸೋಂಕಿತರ ಸಂಖ್ಯೆ 1,038ಕ್ಕೇರಿದೆ. ಇದರಲ್ಲಿ 442 ಮಂದಿ ಗಣಮುಖರಾಗಿದ್ದಾರೆ. 568 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.