ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ 150 ಮಂದಿಗೆ ಹಂದಿಜ್ವರ ಸೋಂಕು.. - ತೆಲಂಗಾಣದಲ್ಲಿ ಹಂದಿಜ್ವರ

ಹಂದಿ ಜ್ವರವು ಎಸ್‌ಐವಿ ವೈರಸ್‌ಗಳಿಂದ ಉಂಟಾಗುವ ಸೋಂಕು. ಇದು ದೇಶಾದ್ಯಂತ ಸಾಮಾನ್ಯವಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ರೋಗ. ಕೆಮ್ಮು ಮತ್ತು ಸೀನುವಿಕೆಯಿಂದ ಉತ್ಪತ್ತಿಯಾಗುವ ದೊಡ್ಡ ಹನಿಗಳ ಮೂಲಕ, ಕಲುಷಿತ ವಸ್ತು ಅಥವಾ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಪರೋಕ್ಷ ಸಂಪರ್ಕ ಮತ್ತು ಕೈಕುಲುಕುವಿಕೆ ಮತ್ತು ತಬ್ಬಿಕೊಳ್ಳುವುದು ಸೇರಿ ನಿಕಟ ಸಂಪರ್ಕದಿಂದ ವೈರಾಣು ಹರಡುತ್ತದೆ.

Telangana reports 150 positive cases of Swine flu
ತೆಲಂಗಾಣದಲ್ಲಿ 150 ಹಂದಿಜ್ವರ ಪ್ರಕರಣಗಳು ಬೆಳಕಿಗೆ

By

Published : Jan 19, 2020, 1:50 PM IST

ಹೈದರಾಬಾದ್: ತೆಲಂಗಾಣದಲ್ಲಿ 150 ಮಂದಿಗೆ ಹಂದಿ ಜ್ವರ ಸೋಂಕು ತಗುಲಿರೋದು ಪರೀಕ್ಷೆ ವೇಳೆ ದೃಢಪಟ್ಟಿದೆ. ಹಂದಿ ಜ್ವರ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಲು ಸರ್ಕಾರವು ರಾಜ್ಯದಾದ್ಯಂತ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದಲ್ಲಿ 150 ಮಂದಿಗೆ ಹಂದಿಜ್ವರ ಸೋಂಕು..

ಈವರೆಗೂ ನಾವು ಸುಮಾರು 370 ಜನರನ್ನು ಹಂದಿ ಜ್ವರ ಪರೀಕ್ಷೆಗೊಳಪಡಿಸಿದ್ದೇವೆ. ಅದರಲ್ಲಿ 150 ಮಂದಿಗೆ ಹಂದಿಜ್ವರ (H1N1) ಸೋಂಕು ಪತ್ತೆಯಾಗಿದೆ.ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಹಂದಿ ಜ್ವರದ ಸೀಸನ್ ಪ್ರಾರಂಭವಾಗುತ್ತದೆ. ಇದು ಫೆಬ್ರವರಿವರೆಗೆ ಮುಂದುವರಿಯುತ್ತದೆ ಎಂದು ಇನ್ಸ್‌ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್ ತೆಲಂಗಾಣ ನಿರ್ದೇಶಕ ಡಾ.ಶಂಕರ್ ಹೇಳಿದರು. ಅಲ್ಲದೆ ಹಂದಿ ಜ್ವರ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಸರ್ಕಾರ ಈಗಾಗಲೇ ರಾಜ್ಯದಾದ್ಯಂತ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದರು.

ಹಂದಿ ಜ್ವರವು ಎಸ್‌ಐವಿ ವೈರಸ್‌ಗಳಿಂದ ಉಂಟಾಗುವ ಸೋಂಕು. ಇದು ದೇಶಾದ್ಯಂತ ಸಾಮಾನ್ಯವಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ರೋಗ. ಕೆಮ್ಮು ಮತ್ತು ಸೀನುವಿಕೆಯಿಂದ ಉತ್ಪತ್ತಿಯಾಗುವ ದೊಡ್ಡ ಹನಿಗಳ ಮೂಲಕ, ಕಲುಷಿತ ವಸ್ತು ಅಥವಾ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಪರೋಕ್ಷ ಸಂಪರ್ಕ ಮತ್ತು ಕೈಕುಲುಕುವಿಕೆ ಮತ್ತು ತಬ್ಬಿಕೊಳ್ಳುವುದು ಸೇರಿ ನಿಕಟ ಸಂಪರ್ಕದಿಂದ ವೈರಾಣು ಹರಡುತ್ತದೆ.

ABOUT THE AUTHOR

...view details