ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ ಅಂತಿಮ ಪರೀಕ್ಷೆ ಇಲ್ಲದೇ 1-9 ತರಗತಿ ಮಕ್ಕಳಿಗೆ ತೇರ್ಗಡೆ ಭಾಗ್ಯ.. - ಪರೀಕ್ಷೆ ಇಲ್ಲದೇ ಮಕ್ಕಳು ಪಾಸ್​

2020-21ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿರುವ ಸಿಬಿಎಸ್‌ಇ, ಐಸಿಎಸ್‌ಇ ಅಂತಾರಾಷ್ಟ್ರೀಯ ಮಂಡಳಿಗಳು ಯಾವುದೇ ರೀತಿಯ ಶುಲ್ಕವನ್ನು ಹೆಚ್ಚಿಸದೆ ಮುಂದಿನ ಆದೇಶದವರೆಗೂ ಮಾಸಿಕ ಆಧಾರದ ಮೇಲೆ ಬೋಧನಾ ಶುಲ್ಕವನ್ನು ಮಾತ್ರ ಪಡೆಯಬೇಕೆಂದು ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿದೆ.

K Chandrasekhar Rao
ಕೆ ಚಂದ್ರಶೇಖರ್​ ರಾವ್

By

Published : May 5, 2020, 7:52 PM IST

ತೆಲಂಗಾಣ /ಹೈದರಾಬಾದ್​ :ಅಂತಿಮ ಪರೀಕ್ಷೆ ಇಲ್ಲದೇ ಒಂದರಿಂದ ಒಂಭತ್ತನೇ ತರಗತಿಯ ಎಲ್ಲಾ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವುದಾಗಿ ತೆಲಂಗಾಣ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಲಾಕ್​ಡೌನ್​ ಕಾರಣದಿಂದಾಗಿ 2019-20ನೇ ಶೈಕ್ಷಣಿಕ ವರ್ಷದ 1-9ನೇ ತರಗತಿಯ ಮಕ್ಕಳಿಗೆ ಸಮ್ಮೇಟಿವ್ ಅಸೆಸ್ಮೆಂಟ್ (ಎಸ್‌ಎ-2) ಪರೀಕ್ಷೆಗಳನ್ನು ನಡೆಸದೆ ಎಲ್ಲಾ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಘೋಷಣೆ ಮಾಡಿದ್ದಾರೆ.

ಸರ್ಕಾರ ಕೊರೊನಾ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು 2019-20ರ ಶೈಕ್ಷಣಿಕ ವರ್ಷದ ಸರ್ಕಾರಿ ಶಾಲೆಗಳು, ಅನುದಾನ ಮತ್ತು ಅನುದಾನ ರಹಿತ ಶಾಲೆಯ 1-9ನೇ ತರಗತಿಯ ಎಲ್ಲಾ ಮಕ್ಕಳ ಸಮ್ಮೇಟಿವ್ ಅಸೆಸ್ಮೆಂಟ್ ಪರೀಕ್ಷೆಗಳನ್ನು ರದ್ದುಗೊಳಿಸಿ ಅವರನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಬೇಕೆಂದು ಆದೇಶ ಹೊರಡಿಸಿದೆ.

2020-21ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿರುವ ಸಿಬಿಎಸ್‌ಇ, ಐಸಿಎಸ್‌ಇ ಅಂತಾರಾಷ್ಟ್ರೀಯ ಮಂಡಳಿಗಳು ಯಾವುದೇ ರೀತಿಯ ಶುಲ್ಕವನ್ನು ಹೆಚ್ಚಿಸದೆ ಮುಂದಿನ ಆದೇಶದವರೆಗೂ ಮಾಸಿಕ ಆಧಾರದ ಮೇಲೆ ಬೋಧನಾ ಶುಲ್ಕವನ್ನು ಮಾತ್ರ ಪಡೆಯಬೇಕೆಂದು ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿದೆ.

ABOUT THE AUTHOR

...view details