ಕರ್ನಾಟಕ

karnataka

ETV Bharat / bharat

ಮನೆ ಕೆಲಸ ಮಾಡುತ್ತಿದ್ದ 5 ವರ್ಷದ ಮಗು ರಕ್ಷಿಸಿದ ತೆಲಂಗಾಣ ಪೊಲೀಸರು - ಬಾಲ ಕಾರ್ಮಿಕ

ಮನೆ ಕೆಲಸ ಮಾಡುತ್ತಿದ್ದ ಹಾಗೂ ದೈಹಿಕ ಹಿಂಸೆಗೆ ಒಳಗಾಗಿದ್ದ ಪುಟ್ಟ ಬಾಲಕಿಯನ್ನು ಚಾದರ್‌ಘಾಟ್ ಪೊಲೀಸರು ರಕ್ಷಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

child
child

By

Published : Jun 13, 2020, 10:37 AM IST

ಹೈದರಾಬಾದ್ (ತೆಲಂಗಾಣ):ವಿಶೇಷ ಚೇತನ ಮಹಿಳೆಯೊಬ್ಬಳ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಐದು ವರ್ಷದ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ. ಮಹಿಳೆ ಮಗುವಿಗೆ ಹೊಡೆಯುತ್ತಿದ್ದಳು ಎಂದು ತಿಳಿದು ಬಂದಿದೆ.

ಪುಟ್ಟ ಬಾಲಕಿ ಚಾದರ್‌ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ವಹೇದ್ ನಗರ ಪ್ರದೇಶದಲ್ಲಿ ಸೀಮಾ ಎಂಬ ವಿಶೇಷ ಚೇತನ ಮಹಿಳೆಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು.

"5 ವರ್ಷದ ಬಾಲಕಿಯನ್ನು ವಿಶೇಷ ಚೇತನ ಮಹಿಳೆಯೊಬ್ಬಳು ಬಾಲ ಕಾರ್ಮಿಕಳಾಗಿ ದುಡಿಸುತ್ತಿದ್ದಾರೆ. ಜೊತೆಗೆ ಬಾಲಕಿಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ನಮಗೆ ದೂರು ಬಂದಿದೆ" ಎಂದು ಚಾದರ್‌ಘಾಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಲಿಶೆಟ್ಟಿ ಸತೀಶ್ ಹೇಳಿದ್ದಾರೆ.

"ನಾವು ತಕ್ಷಣ ಅವರ ನಿವಾಸದ ಮೇಲೆ ದಾಳಿ ನಡೆಸಿ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದೇವೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ" ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಬಾಲಕಿಯ ದೇಹದಲ್ಲಿ ಸುಟ್ಟ ಗಾಯಗಳು ಮತ್ತು ಸ್ಟಿಚ್​ಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details