ಹೈದರಾಬಾದ್(ತೆಲಂಗಾಣ):ಹವಾಲಾ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳ ಬಂಧನ ಮಾಡುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ ಬರೋಬ್ಬರಿ 3 ಕೋಟಿ ರೂ. ನಗದು ವಶ ಪಡಿಸಿಕೊಂಡಿದ್ದಾರೆ.
ಹವಾಲಾ ದಂಧೆ: ನಾಲ್ವರು ಆರೋಪಿಗಳು ಸೇರಿ 3 ಕೋಟಿ ರೂ. ನಗದು ವಶ
ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿರುವ ಪೊಲೀಸರು 3 ಕೋಟಿ ರೂ. ನಗದು ಹಣ ವಶಪಡಿಸಿಕೊಂಡು, ನಾಲ್ವರು ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Rs 3 crore cash from Hyderabad
ಬಜಾರ್ ಹಿಲ್ಸ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವ ಹೈದರಾಬಾದ್ ಸಿಟಿ ಪೊಲೀಸ್ ಕಮಿಷನರ್ ಅಂಜನಿ ಕುಮಾರ್, ಖಚಿತ ಮಾಹಿತಿ ಪಡೆದುಕೊಂಡು ಈ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.
ಎರಡು ಕಾರುಗಳಲ್ಲಿ ಅಪಾರ ಪ್ರಮಾಣದ ಹಣದೊಂದಿಗೆ ಬಜಾರ್ ಹಿಲ್ಸ್ ಬಳಿ ಹೋಗುತ್ತಿರುವ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿದಾಗ ಇವರು ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ. ಬಂಧಿತರೆಲ್ಲರೂ ಗುಜರಾತ್ ಮೂಲದವರು ಎನ್ನಲಾಗಿದ್ದು, ಬಾಂಬೆ ಮೂಲಕ ಕಂಪನಿ ಹೆಸರು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.