ಜನಗಾಮ:ಶನಿವಾರ ಮಧ್ಯೆರಾತ್ರಿ ಸಚಿವರ ಭದ್ರತಾ ಪಡೆ ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಘನಪುರಂ ತಾಲೂಕಿನ ಚಿಂತೂರಿನಲ್ಲಿ ನಡೆದಿದೆ.
ಸಚಿವರ ಭದ್ರತಾ ಕಾರು ಪಲ್ಟಿ,ಇಬ್ಬರ ದುರ್ಮರಣ.. ಆಸ್ಪತ್ರೆಯಲ್ಲೇ ಕಣ್ಣೀರು ಹಾಕಿದ ಮಿನಿಸ್ಟರ್! - ಸಚಿವರ ಭದ್ರತಾ ಪಡೆ ಕಾರು ಪಲ್ಟಿ
ಮಧ್ಯೆರಾತ್ರಿ ಸಚಿವರ ಭದ್ರತಾ ಪಡೆಯ ಕಾರು ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್ನಿಂದ ಪಾಲಕುರ್ತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಡ್ರೈವರ್ ಪಾರ್ಥಸಾರಥಿ (30), ಸಾಮಾಜಿಕ ಮಾಧ್ಯಮ ಜವಾಬ್ದಾರಿ ಕಾರ್ಯಕರ್ತ ಪೂರ್ಣೆಂದರ್ (27) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಮ್ಮ ಬೆಂಬಲಿಗರನ್ನು ಕಳೆದುಕೊಂಡ ಸಚಿವ ಆಸ್ಪತ್ರೆಯಲ್ಲೇ ಕಣ್ಣೀರು ಹಾಕಿದರು. ಬಳಿಕ ಕಾರ್ಯಕರ್ತರು ಸಮಾಧಾನಪಡಿಸಿದರು.
ಈ ಅಪಘಾತದಲ್ಲಿ ಗನ್ಮೆನ್ ನರೇಶ್, ಅಟೆಂಡರ್ ತಾತಾರಾವ್ ಮತ್ತು ಶಿವ ಎಂಬುವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಈ ಘಟನೆಯಲ್ಲಿ ರಾಜ್ಯ ಪಂಚಾಯತ್ ರಾಜ್ ಸಚಿವ ಎರ್ರಬೆಲ್ಲಿ ದಯಾಕರ್ ರಾವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಚಿವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಗಾಯಾಳುಗಳ ಪರಸ್ಥಿತಿ ವಿಚಾರಿಸಿದರು.