ಹೈದರಾಬಾದ್(ತೆಲಂಗಾಣ): ತೆಲಂಗಾಣ ರಾಜ್ಯ ಮಾನವ ಹಕ್ಕುಗಳ ಆಯೋಗ (ಟಿಎಸ್‌ಹೆಚ್‌ಆರ್‌ಸಿ) ಇಲ್ಲಿನ ನಾಲ್ಕು ವರ್ಷದ ಬಾಲಕನ ಮೇಲೆ ಹಂದಿಗಳು ನಡೆಸಿದ ಮಾರಣಾಂತಿಕ ದಾಳಿಯ ಬಗ್ಗೆ ವರದಿ ನೀಡುವಂತೆ ನಗರ ನಾಗರಿಕ ಸಂಸ್ಥೆಗೆ ಬುಧವಾರ ಸೂಚಿಸಿದೆ.
ಹಂದಿಗಳ ದಾಳಿಗೆ ನಾಲ್ಕರ ಬಾಲಕ ಬಲಿ: ವರದಿ ಕೇಳಿದ ಟಿಎಸ್‌ಹೆಚ್‌ಆರ್‌ಸಿ - ಎನ್‌ಜಿಒ ಬಾಲಾಲಾ ಹಕ್ಕುಲ ಸಂಘಂ
ನಾಲ್ಕು ವರ್ಷದ ಬಾಲಕನ ಮೇಲೆ ಹಂದಿಗಳು ನಡೆಸಿದ ಮಾರಣಾಂತಿಕ ದಾಳಿಯ ಬಗ್ಗೆ ವರದಿ ನೀಡುವಂತೆ ತೆಲಂಗಾಣ ರಾಜ್ಯ ಮಾನವ ಹಕ್ಕುಗಳ ಆಯೋಗ ನಗರ ನಾಗರಿಕ ಸಂಸ್ಥೆಗೆ ಬುಧವಾರ ಸೂಚಿಸಿದೆ.
ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ನಗರ ಮೂಲದ ಎನ್‌ಜಿಒ ಬಾಲಾಲಾ ಹಕ್ಕುಲ ಸಂಘಂ (ಬಿಹೆಚ್‌ಎಸ್) ಸಲ್ಲಿಸಿದ ಮನವಿಯ ಮೇರೆಗೆ ಆಯೋಗವು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ದಕ್ಷಿಣ ವಲಯ ಆಯುಕ್ತರಿಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಮಂಗಳವಾರ ಸಂಜೆ ಗುಡಿಸಲಿನಿಂದ ಹೊರಬಂದು ಆಡುತ್ತಿದ್ದ ಬಾಲಕ ಕಸದ ರಾಶಿಯ ಬಳಿ ಹೋದಾಗ ಹಂದಿಗಳು ಅವನ ಮೇಲೆ ಎರಗಿವೆ. ಮನೆಯೊಳಗಿದ್ದ ಪೋಷಕರಿಗೆ ವಿಚಾರ ತಿಳಿದಿದ್ದು, ದಾರಿಹೋಕರು ಮಗುವಿನ ಚಿಂದಿಯಾದ ರಕ್ತಸಿಕ್ತ ದೇಹವನ್ನು ನೋಡಿ ತಿಳಿಸಿದ್ದರು. ಈ ಹಿನ್ನೆಲೆ ದೂರು ದಾಖಲಿಸಿರುವ ಬಾಲಕನ ಪೋಷಕರು, ತಮ್ಮ ಅರ್ಜಿಯಲ್ಲಿ ಬೀದಿ ನಾಯಿ, ಬಿಡಾಡಿ ಹಂದಿಗಳನ್ನು ನಿರ್ಮೂಲನೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆ ನಗರದ ಇತರೆ ಮಕ್ಕಳನ್ನಾದರೂ ಉಳಿಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಹೆಚ್‌ಎಂಸಿ ಆಯುಕ್ತರಿಗೆ ನಿರ್ದೇಶನಗಳನ್ನು ನೀಡಿ ಎಂದು ಬಿಹೆಚ್‌ಎಸ್ ಗೌರವ ಅಧ್ಯಕ್ಷ ಅಚ್ಯುತ ರಾವ್ ಆಯೋಗಕ್ಕೆ ಮನವಿ ಮಾಡಿದ್ದಾರೆ.