ಕರ್ನಾಟಕ

karnataka

ETV Bharat / bharat

ಡಿ.9ರವರೆಗೆ ಆರೋಪಿಗಳ ಶವ ಸುರಕ್ಷಿತವಾಗಿಡಿ: ತೆಲಂಗಾಣ ಸರ್ಕಾರಕ್ಕೆ ಹೈಕೋರ್ಟ್​​ ಆದೇಶ - ಪಶುವೈದ್ಯೆ ಆರೋಪಿಗಳ ಶವ ಸುರಕ್ಷಿತವಾಗಿಡಿ

ಹೈದರಾಬಾದ್‌ನಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರಿಗಳನ್ನ ಈಗಾಗಲೇ ಎನ್​ಕೌಂಟರ್​ ಮಾಡಲಾಗಿದ್ದು, ಅವರ ಶವಗಳನ್ನು ಡಿಸೆಂಬರ್​​ 9ವರೆಗೆ ಸುರಕ್ಷಿತವಾಗಿಡುವಂತೆ ಹೈಕೋರ್ಟ್​ ಸರ್ಕಾರಕ್ಕೆ ಆದೇಶಿಸಿದೆ.

Telangana High Court
ಅತ್ಯಾಚಾರ ಆರೋಪಿಗಳು

By

Published : Dec 6, 2019, 10:51 PM IST

ಹೈದರಾಬಾದ್​​: ಇಡೀ ದೇಶದಲ್ಲಿ ತಲ್ಲಣ ಉಂಟುಮಾಡಿದ್ದ ಹೈದರಾಬಾದ್ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಇವತ್ತು ಬೆಳಗ್ಗೆ ಎನ್‍ಕೌಂಟರ್ ಮಾಡಿದ್ದಾರೆ. ಈ ಆರೋಪಿಗಳ ಶವಗಳನ್ನು ಡಿ.9ರವರೆಗೆ ಸುರಕ್ಷಿತವಾಗಿಡುವಂತೆ ತೆಲಂಗಾಣ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಡಿಸೆಂಬರ್​​ 9ರ ಸಂಜೆ 8 ಗಂಟೆವರೆಗೆ ಮೃತ ಆರೋಪಿಗಳ ಶವ ಸುರಕ್ಷಿತವಾಗಿಡುವಂತೆ ತೆಲಂಗಾಣ ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿದೆ. ಜತೆಗೆ ಆರೋಪಿಗಳ ಮೃತದೇಹಗಳನ್ನು ಯಾವುದೇ ಕಾರಣಕ್ಕೂ ಅವರ ಕುಟುಂಬಸ್ಥರಿಗೆ ನೀಡದಂತೆಯೂ ಆದೇಶದಲ್ಲಿ ತಿಳಿಸಿದೆ.

ಪಶುವೈದ್ಯೆ ಜಿಶಾ(ಹೆಸರು ಬದಲಿಸಲಾಗಿದೆ) ಎಂಬಾಕೆಯನ್ನು ಭೀಕರವಾಗಿ ಹತ್ಯೆಗೈದ ನಾಲ್ವರು ಆರೋಪಿಗಳನ್ನು ಇಂದು ಬೆಳಗ್ಗೆ 3.30ರ ವೇಳೆ ಪೊಲೀಸರು ಶೂಟೌಟ್​ ಮಾಡಿ ಹತ್ಯೆ ಮಾಡಿದ್ದರು. ಹೈದರಾಬಾದ್‌ ಪೊಲೀಸರ ಈ ಕಾರ್ಯಕ್ಕೆ ದೇಶವ್ಯಾಪಿ ಮೆಚ್ಚುಗೆ ವ್ಯಕ್ತವಾಗಿತ್ತು.

ABOUT THE AUTHOR

...view details