ಕರ್ನಾಟಕ

karnataka

ETV Bharat / bharat

1.12 ಕೋಟಿ ರೂ. ಲಂಚ ಪಡೆದುಕೊಳ್ಳುತ್ತಿದ್ದಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ ಕಲೆಕ್ಟರ್​​​​ - ನೋ ಅಬ್ಜಕ್ಷನ್​​ ಸರ್ಟಿಫಿಕೇಟ್​

ರೈತರಿಂದ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಸರ್ಕಾರಿ ಅಧಿಕಾರಿಯೋರ್ವ ರೆಡ್​ ಹ್ಯಾಂಡ್​ ಆಗಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ACB officials arrest
ACB officials arrest

By

Published : Sep 9, 2020, 7:06 PM IST

Updated : Sep 9, 2020, 8:29 PM IST

ಹೈದರಾಬಾದ್​:112 ಎಕರೆ ಜಮೀನಿಗೆ ನೋ ಅಬ್ಜಕ್ಷನ್​​ ಸರ್ಟಿಫಿಕೇಟ್​ ನೀಡಲು ಬರೋಬ್ಬರಿ 1.12 ಕೋಟಿ ರೂ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಸರ್ಕಾರಿ ಅಧಿಕಾರಿಯೋರ್ವ ರೆಡ್ ಹ್ಯಾಂಡ್​​ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮೇಡಕ್​ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್​​ ಗಡ್ಡಮ್​​ ನಾಗೇಶ್​ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ ಕಲೆಕ್ಟರ್​​​​

ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಚೆಪ್ಪಲೂರ್ತಿ ಗ್ರಾಮದಲ್ಲಿ 112 ಎಕರೆ ಜಮೀನಿಗೆ ಸಂಬಂಧಿಸಿದಂತೆ ನೋ ಅಬ್ಜಕ್ಷನ್​ ಸರ್ಟಿಫಿಕೆಟ್​ ನೀಡಲು ಲಂಚ ಪಡೆದುಕೊಳ್ಳುತ್ತಿದ್ದರು. 1 ಎಕರೆಗೆ 1 ಲಕ್ಷ ರೂಪಾಯಿಯಂತೆ ಒಟ್ಟು 112 ಎಕರೆ ಜಮೀನಿಗೆ 1.12 ಕೋಟಿ ರೂ ಪಡೆದುಕೊಳ್ಳಲು ಮುಂದಾಗಿದ್ದರು. ಇದರಲ್ಲಿ 40 ಲಕ್ಷ ರೂ ಹಣದ ರೂಪದಲ್ಲಿ ಹಾಗೂ 72 ಲಕ್ಷ ರೂ 5 ಎಕರೆ ಜಮೀನಿನ ರೂಪದಲ್ಲಿ ಪಡೆದುಕೊಳ್ಳಲು ಅವರು ಬೇಡಿಕೆಯಿಟ್ಟಿದ್ದರು.

ರೈತರು ಅಧಿಕಾರಿ ಜತೆ ನಡೆಸಿರುವ ಸಂಭಾಷಣೆ ರೆಕಾರ್ಡ್​ ಮಾಡಿಕೊಂಡು ಎಸಿಬಿ ದಾಳಿ ನಡೆಸಿದ್ದು, ಈ ವೇಳೆ 40 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಅವರ ನಿವಾಸ ಸೇರಿದಂತೆ ವಿವಿಧ 11 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Last Updated : Sep 9, 2020, 8:29 PM IST

ABOUT THE AUTHOR

...view details