ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ ಮೇ 29ರವರೆಗೆ ಲಾಕ್​ಡೌನ್​ ಮುಂದುವರಿಕೆ: ಸಿಎಂ ಕೆಸಿಆರ್​​ ಘೋಷಣೆ - ತೆಲಂಗಾಣದಲ್ಲಿ ಕೊರೊನಾ ವೈರಸ್

ರಾಜ್ಯದಲ್ಲಿ ಕೆಂಪು ವಲಯದಲ್ಲಿ ಆರು, ಕಿತ್ತಳೆ 18 ಮತ್ತು ಹಸಿರು ವಲಯದಲ್ಲಿ ಒಂಭತ್ತು ಜಿಲ್ಲೆಗಳಿವೆ. ಮೂರು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಜಿಎಚ್‌ಎಂಸಿ, ರಂಗಾರೆಡ್ಡಿ ಮತ್ತು ಮಲ್ಕಾಜ್‌ಗಿರಿ ಜಿಲ್ಲೆಗಳ ಸ್ಥಿತಿ ಆತಂಕಕಾರಿಯಾಗಿದೆ ಎಂದು ಸಿಎಂ ಕೆಸಿಆರ್​ ಹೇಳಿದ್ದಾರೆ.

By

Published : May 5, 2020, 11:55 PM IST

ಹೈದರಾಬಾದ್​: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 29ರವರೆಗೆ ಲಾಕ್​ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.

ರಾಜ್ಯ ರಾಜಧಾನಿ ಹೈದರಾಬಾದ್ ಮತ್ತು ಅದರ ನೆರೆಯ ರಂಗಾರೆಡ್ಡಿ ಮತ್ತು ಮಲ್ಕಾಜ್‌ಗಿರಿ ಜಿಲ್ಲೆಗಳ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಾವು ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳುವ ಮಾರ್ಗವಿಲ್ಲ ಎಂದು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೆಂಪು ವಲಯದಲ್ಲೂ ಅಂಗಡಿಗಳು ತೆರೆಯಬಹುದು ಎಂದು ಕೇಂದ್ರ ಹೇಳುತ್ತದೆ. ಆದರೆ ನಾವು ಹೈದರಾಬಾದ್, ಮಲ್ಕಾಜ್‌ಗಿರಿ, ಸೂರ್ಯಪೇಟೆ, ವಿಕರಾಬಾದ್‌ನಲ್ಲಿ ಯಾವುದೇ ಅಂಗಡಿಗಳನ್ನು ತೆರೆಯುತ್ತಿಲ್ಲ ಎಂದು ರಾವ್ ಹೇಳಿದರು.

ತೆಲಂಗಾಣದಲ್ಲಿ ಇದುವರೆಗೆ 1,096 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 439 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 628 ಮಂದಿ ಗುಣಮುಖರಾಗಿದ್ದಾರೆ. ಕೇಂದ್ರವು ಮೂರನೇ ಹಂತದ ಲಾಕ್​ಡೌನ್​ಅನ್ನು ಮೇ 17ರ ತನಕ ವಿಸ್ತರಿಸಿದೆ.

ABOUT THE AUTHOR

...view details