ಹೈದರಾಬಾದ್ :ವಿಪಕ್ಷಗಳ ಪ್ರತಿಭಟನೆ ವೇಳೆ ಸೀಟು ಇಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರಿಬ್ಬರು ಕೈಕೈ ಮಿಲಾಯಿಸಿ, ತಳ್ಳಾಡಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕುರ್ಚಿಗಾಗಿ 'ಕೈ-ಕೈ' ಮಿಲಾಯಿಸಿದ ನಾಯಕರು : ವಿಡಿಯೋ ವೈರಲ್ - undefined
ವಿಪಕ್ಷಗಳ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ದ ಮಾಜಿ ಸಚಿವ ವಿ. ಹನುಮಂತರಾವ್ ಹಾಗೂ ಸ್ಥಳೀಯ ನಾಯಕ ನಾಗೇಶ್ ಮುದಿರಾಜ್ ತಳ್ಳಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದಕೇಂದ್ರದಮಾಜಿ ಸಚಿವ ವಿ. ಹನುಮಂತರಾವ್ ಹಾಗೂ ಸ್ಥಳೀಯ ನಾಯಕ ನಾಗೇಶ್ ಮುದಿರಾಜ್ ತಳ್ಳಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಯ ಶಿಕ್ಷಣ ಮಂಡಳಿಯ ನೀತಿಯಿಂದಾಗಿ 22 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದ ವಿಪಕ್ಷಗಳು, ಸಿಎಂ ಕೆ. ಚಂದ್ರಶೇಖರ್ ರಾವ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದವು. ಪ್ರತಿಭಟನೆ ನಡೆಸಲು ಆಸನ ವ್ಯವಸ್ಥೆಗೊಳಿಸುವಲ್ಲಿ ಹನುಮಂತರಾವ್ ಹಾಗೂ ನಾಗೇಶ್ ನಡುವೆ ವಾಗ್ವಾದ ಉಂಟಾಗಿದೆ. ಮಾತಿಗೆ ಮಾತು ಬೆಳೆದು, ಇಬ್ಬರು ಕೈಕೈ ಮಿಲಾಯಿಸಿದ್ದಾರೆ. ತಳ್ಳಾಡಿಕೊಳ್ಳುತ್ತಿದ್ದ ಇಬ್ಬರನ್ನೂ ಅಲ್ಲಿಯೇ ಇದ್ದ ಕಾರ್ಯಕರ್ತರು ಬಿಡಿಸಿ, ಸಮಾಧಾನಪಡಿಸಿದ್ದಾರೆ.