ಕರ್ನಾಟಕ

karnataka

ETV Bharat / bharat

ತೆಲಂಗಾಣ ಸಿಎಂಗೆ ಶ್ವಾಸಕೋಶದ ನೋವು, ಉರಿಯೂತದ ಬಾಧೆ; ಆಸ್ಪತ್ರೆಯಲ್ಲಿ ತಪಾಸಣೆ - ಆಸ್ಪತ್ರೆಯಲ್ಲಿ ಕೆಸಿಆರ್​ಗೆ ವೈದ್ಯಕೀಯ ತಪಾಸಣೆ

ಸಿಕಂದರಾಬಾದ್​ನಲ್ಲಿನ ಯಶೋದಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿಕೊಂಡಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಶ್ವಾಸಕೋಶದ ಉರಿಯೂತದಿಂದ ಬಳಲುತ್ತಿದ್ದಾರೆ.

Telangana CM KCR
Telangana CM KCR

By

Published : Jan 7, 2021, 5:07 PM IST

ಸಿಕಂದರಾಬಾದ್​​​(ತೆಲಂಗಾಣ):ಶ್ವಾಸಕೋಶದ ಉರಿಯೂತದಿಂದ ಬಳಲುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಯಶೋದಾ​ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಸಿಎಂ ಅವರ ಖಾಸಗಿ ವೈದ್ಯ​ ಎಂ.ವಿ ರಾವ್​.ನವನೀತ್​ ಸಾಗರ್​ ಹಾಗೂ ಹೃದಯರೋಗ ತಜ್ಞ ಡಾ.ಪ್ರಮೋದ್​ ಕುಮಾರ್​ ವೈದ್ಯಕೀಯ ತಪಾಸಣೆ ನಡೆಸಿದ್ದು, ಈ ವೇಳೆ ಶ್ವಾಸಕೋಶದಲ್ಲಿ ನೋವು ಮತ್ತು ಉರಿಯೂತದಿಂದ ಬಳಲುತ್ತಿರುವುದು ತಿಳಿದು ಬಂದಿದೆ.

ಇದೀಗ ಅವರಿಗೆ ಎಂಆರ್​ಐ, ಸಿಟಿ ಸ್ಕ್ಯಾನ್​ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಮಗಳು ಕವಿತಾ ಹಾಗೂ ಸಂತೋಷ್​ ಕುಮಾರ್​ ಸಿಎಂ ಜೊತೆಗಿದ್ದರು. ಈ ಪರೀಕ್ಷೆಗಳ ವರದಿ ಮುಂದಿನ ಮೂರು ದಿನಗಳಲ್ಲಿ ಬರುವ ಸಾಧ್ಯತೆ ಇದೆ.

ABOUT THE AUTHOR

...view details