ಕರ್ನಾಟಕ

karnataka

ETV Bharat / bharat

ಇಂದಿನಿಂದ ತೆಲಂಗಾಣ ವಿಧಾನಸಭೆ ಅಧಿವೇಶನ: ಶಾಸಕರ ನಡುವೆ 6 ಅಡಿ ಸಾಮಾಜಿಕ ಅಂತರ - ಸಂತಾಪ ಸೂಚಕ ಮಂಡನೆ

ರಾಜಕೀಯ ಎಂಬ ಸಮುದ್ರದಲ್ಲಿ ಯಶಸ್ವಿಯಾಗಿ ಈಜಿದವರು ಪ್ರಣಬ್‌ ಮುಖರ್ಜಿಯವರು. ಬಂಗಾಳದ ಅತಿ ಸಣ್ಣ ಗ್ರಾಮದಿಂದ ಬಂದು ರಾಷ್ಟ್ರಪತಿ ಹುದ್ದೆಗೇರಿದರು. ಆರ್ಥಿಕತೆಯಲ್ಲಿ ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಿಂದ ನಿಲ್ಲುವಂತೆ ಮಾಡಿದರು ಎಂದು ಇತ್ತೀಚೆಗೆ ನಿಧನರಾದ ಪ್ರಣಬ್‌ ಅವರ ಸೇವೆಯನ್ನು ತೆಲಂಗಾಣ ವಿಧಾನಸಭೆಯ ಅಧಿವೇಶನದಲ್ಲಿಂದು ಸಿಎಂ ಕೆ.ಚಂದ್ರಶೇಖರ್‌ ರಾವ್‌ ಸ್ಮರಿಸಿದ್ದಾರೆ.

telangana-cm-kcr-moved-condolence-motion-in-assembly
ಇಂದಿನಿಂದ ತೆಲಂಗಾಣ ವಿಧಾನಸಭೆ ಅಧಿವೇಶನ; ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಸೇವೆ ಸ್ಮರಣೆ

By

Published : Sep 7, 2020, 3:43 PM IST

ಹೈದರಾಬಾದ್:ತೆಲಂಗಾಣ ವಿಧಾನಸಭೆ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಪ್ರತಿಯೊಬ್ಬ ಸದಸ್ಯರೂ ಕನಿಷ್ಠ 6 ಅಡಿ ಅಂತರ ಕಾಯ್ದುಕೊಂಡು ಆಸೀನರಾಗಿದ್ದ ಕಲಾಪದಲ್ಲಿಂದು ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಸಂತಾಪ ಸೂಚಕ ಮಂಡಿಸಿ ಮಾತನಾಡಿದ ಸಿಎಂ ಕೆ.ಚಂದ್ರಶೇಖರ್‌ ರಾವ್‌, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ದೇಶಕ್ಕೆ ನೀಡಿದ ಸೇವೆಯನ್ನು ಸ್ಮರಿಸಿದರು. ರಾಜಕೀಯ ಎಂಬ ಸಮುದ್ರದಲ್ಲಿ ಯಶಸ್ವಿಯಾಗಿ ಈಜಿದವರು ಪ್ರಣಬ್‌ ಮುಖರ್ಜಿಯವರು. ಬಂಗಾಳದ ಅತಿ ಸಣ್ಣ ಗ್ರಾಮದಿಂದ ಬಂದು ರಾಷ್ಟ್ರಪತಿ ಹುದ್ದೆಗೇರಿದರು. ಆರ್ಥಿಕತೆಯಲ್ಲಿ ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಿಂದ ನಿಲ್ಲುವಂತೆ ಮಾಡಿದರು ಅವರ ಕೊಡುಗೆಯನ್ನು ಕೊಂಡಾಡಿದರು.

ಜಿಎಸ್‌ಟಿ ಪರಿಹಾರ, ಶ್ರೀಶೈಲಂ ಬೆಂಕಿ ಅವಘಡ, ಕೊರೆೊನಾ ವೈರಸ್‌ ತಡೆಯಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಾಳೆ ಚರ್ಚೆ ನಡೆಯಲಿದೆ.

ತೆಲಂಗಾಣ ವಿಧಾನಸಭೆ ಕಲಾಪ ಆರಂಭಕ್ಕೂ ಒಂದು ದಿನ ಮೊದಲೇ ಎಲ್ಲಾ ಸದಸ್ಯರು, ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೂಳಪಡಿಸಲಾಗಿತ್ತು. ನೆಗೆಟಿವ್‌ ವರದಿ ಬಂದಂತಹವರಿಗೆ ಮಾತ್ರ ಅಧಿವೇಶನಕ್ಕೆ ಪ್ರವೇಶ ನೀಡಲಾಗಿದೆ. ಮಾಸ್ಕ್‌ ಧರಿಸುವುದು ಕಡ್ಡಾಯ ಸೇರಿದಂತೆ ಸರ್ಕಾರದ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

ABOUT THE AUTHOR

...view details