ಕರ್ನಾಟಕ

karnataka

ETV Bharat / bharat

ಕೊರೊನಾ ಕರಿನೆರಳಿನ ನಡುವೆ ಸರಳವಾಗಿ ರಾಜ್ಯ ಸಂಸ್ಥಾಪನಾ ದಿನ ಆಚರಿಸಿದ ತೆಲಂಗಾಣ - ಸಂಸ್ಥಾಪನಾ ದಿನ ಆಚರಿಸಿದ ತೆಲಂಗಾಣ

ದೇಶದ ಕಿರಿಯ ರಾಜ್ಯ ತೆಲಂಗಾಣ ಹುಟ್ಟು ಪಡೆದು ಇಂದಿಗೆ ಆರು ವರ್ಷಗಳು ಸಂದಿವೆ. ಹೀಗಾಗಿ ರಾಜ್ಯದಲ್ಲಿಂದು ಆರನೇ ವರ್ಷದ ತೆಲಂಗಾಣ ಸಂಸ್ಥಾಪನಾ ದಿನವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಆಂಧ್ರ ಪ್ರದೇಶ ರಾಜ್ಯದಿಂದ 2014 ಜುಲೈ 2ರಂದು ತೆಲಂಗಾಣ ವಿಭಜನೆಗೊಂಡಿದ್ದು, ಈ ದಿನವನ್ನು ರಾಜ್ಯದ ಸರ್ಕಾರಿ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ದಶಕಗಳ ಪ್ರತ್ಯೇಕತೆಯ ಕೂಗಿಗೇ ಈದಿನ ತೆಲಂಗಾಣ ಪ್ರಾಂತ್ಯದ ಜನರಿಗೆ ಜಯ ಸಂದಿತ್ತು.

Telangana formation day
ಕೆಸಿಆರ್​

By

Published : Jun 2, 2020, 4:00 PM IST

ಹೈದರಾಬಾದ್: ಕೊರೊನಾ ಕರಿನೆರಳಿನ ನಡುವೆ ಭಾರತದ ಯುವ ರಾಜ್ಯ ತೆಲಂಗಾಣ ಇಂದು ತನ್ನ ಆರನೇ ವರ್ಷದ ಸಂಸ್ಥಾಪನಾ ದಿನವನ್ನು ಸರಳವಾಗಿ ಆಚರಿಸಿದೆ.

ಕೊರೊನಾ ಲಾಕ್​ಡೌನ್​ನಿಂದಾಗಿ ರಾಜ್ಯ ಹುಟ್ಟು ಪಡೆದ ಈ ಸಂಭ್ರಮದ ದಿನವನ್ನು ಸರಳ ಆಚರಣೆಯೊಂದಿಗೆ ಸರ್ಕಾರ ಆಚರಿಸಿದೆ. ಹೀಗಾಗಿ ಆಡಂಬರ ಮತ್ತು ಸಂತೋಷ ಈ ದಿನ ಮರೆಯಾಗಿದೆ.

ತೆಲಂಗಾಣದ ರಾಜಧಾನಿ ಹೈದರಾಬಾದ್​ ನಗರದ ಹೃದಯಭಾಗದಲ್ಲಿರುವ ಅಸೆಂಬ್ಲಿ ಕಟ್ಟಡದ ಬಳಿಯಿರುವ ತೆಲಂಗಾಣ ಹುತಾತ್ಮರ ಸ್ಮಾರಕ ಗನ್ ಪಾರ್ಕ್‌ನಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ರಾಜ್ಯಕ್ಕಾಗಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿದರು.

ಆಂಧ್ರ ಪ್ರದೇಶದಿಂದ ಪ್ರತ್ಯೇಕ ರಾಜ್ಯಕ್ಕಾಗಿ ದಶಕಗಳಿಂದ ಹೋರಾಡುತ್ತಿದ್ದ ತೆಲಂಗಾಣ ಪ್ರಂತ್ಯದ ಜನರಿಗೆ 2014ರಲ್ಲಿಮ ಅಂತಿಮವಾಗಿ ಶುಭಸುದ್ದಿ ಸಿಕ್ಕಿತ್ತು. ನಿರಂತರ ಹೋರಾಟ ಹಾಗೂ ಸಾವಿರಕ್ಕೂ ಹೆಚ್ಚು ಮಂದಿಯ ಬಲಿದಾನದ ನಂತರ ಕಳೆದ 2014ರ ಜೂನ್​ 2ರಂದು ಅಧಿಕೃತವಾಗಿ ತೆಲಂಗಾಣವನ್ನು ರಾಜ್ಯವನ್ನಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಜೊತೆಗೆ ಹೈದರಾಬಾದ್​ ನಗರವನ್ನು ಇದರ ರಾಜಧಾನಿಯಾಗಿ ಘೋಷಿಸಲಾಗಿತ್ತು. ಈ ದಿನವನ್ನು ಇಂದು ತೆಲಂಗಾಣ ಉದಯಿಸಿದ ದಿನ(ತೆಲಂಗಾಣ ರಾಜ್ಯ ಅವತರಣ ದಿನ)ವಾಗಿ ಆಚರಿಸಲಾಗುತ್ತಿದೆ.

ರಾಜ್ಯ ಉದಯಿಸಿದಾಗಿನಿಂದ ಟಿಆರ್​ಎಸ್​(ತೆಲಂಗಾಣ ರಾಷ್ಟ್ರಂ ಸಮಿತಿ) ಪಕ್ಷದ ಸ್ಥಾಪಕ ಹಾಗೂ ಮುಖ್ಯಸ್ಥ ಕೆ ಚಂದ್ರಶೇಖರ್​ ರಾವ್​ ಸತತ ಎರಡನೇ ಅವಧಿಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕೆಂಬ ಏಕೈಕ ಉದ್ದೇಶದಿಂದ ಪಕ್ಷ ಸ್ಥಾಪಿಸಿದ ಜನಪ್ರಿಯ ನಾಯಕ ಕೆಸಿಆರ್​ ಆಗಿದ್ದು, ರಾಜ್ಯದಲ್ಲಿ ಇವರಿಗೆ ಭಾರಿ ಜನಬೆಂಬಲವಿದೆ. ಇಂದು ಸಿಎಂ ಕೆಸಿಆರ್, ರಾಜ್ಯತ್ವವನ್ನು ಸಾಧಿಸಿದ್ದಕ್ಕಾಗಿ ಪ್ರಾಣ ಅರ್ಪಿಸಿದ ಹುತಾತ್ಮರಿಗೆ ವಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಶ್...

ಇನ್ನೊಂದೆಡೆ ರಾಜ್ಯ ಉದಯಿಸಿದ ದಿನಕ್ಕಾಗಿ ತೆಲಂಗಾಣ ಜನತೆಗೆ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಶುಭಾಶಯ ಕೋರಿದ್ದಾರೆ. ದೇಶದ ಪ್ರಗತಿಯಲ್ಲಿ ರಾಜ್ಯದ ಜನತೆ ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯದ ಜನತೆಯ ಅಭಿವೃದ್ಧಿ ಹಾಗೂ ಶ್ರೇಯಸ್ಸಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ನಮೋ ತಿಳಿಸಿದ್ದಾರೆ.

ABOUT THE AUTHOR

...view details