ಹೈದರಾಬಾದ್ :ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಧ್ಯಕ್ಷತೆಯಲ್ಲಿ ತೆಲಂಗಾಣ ಸರ್ಕಾರದ ಸಚಿವ ಸಂಪುಟ ಸಭೆ ಇಂದು ನಡೆಯಲಿದ್ದು, ನಾಲ್ಕನೇ ಹಂತದ ಲಾಕ್ ಡೌನ್ ಕಾರ್ಯಗತಗೊಳಿಸಲು ಕಾರ್ಯತಂತ್ರ ರೂಪಿಸುವ ಕುರಿತು ಮತ್ತು ಕೇಂದ್ರ ಹೊರಡಿಸಿದ ಹೊಸ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.
ಇಂದು ತೆಲಂಗಾಣ ಸರ್ಕಾರದ ಸಚಿವ ಸಂಪುಟ ಸಭೆ... ಹೊಸ ಮಾರ್ಗಸೂಚಿ ಕುರಿತು ಚರ್ಚೆ
ಇಂದು ಸಂಜೆ ತೆಲಂಗಾಣ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದ್ದು, ಲಾಕ್ ಡೌನ್ ಬಗ್ಗೆ ಕೇಂದ್ರ ಹೊರಡಿಸಿರುವ ಹೊಸ ಮಾರ್ಗಸೂಚಿಗಳು ಮತ್ತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಜೊತೆಗೆ ರಾಜ್ಯ ಸರ್ಕಾರದ ಉದ್ದೇಶಿತ ಕೃಷಿ ನೀತಿಯ ಮಾರ್ಗಸೂಚಿಗಳ ಬಗ್ಗೆಯೂ ಚರ್ಚೆ ನಡೆಯಲಿದೆ.
ಇಂದು ಸಂಜೆ ತೆಲಂಗಾಣ ಸರ್ಕಾರದ ಸಚಿವ ಸಂಪುಟ ಸಭೆ
ಇಂದು ಸಂಜೆ 5 ಗಂಟೆಗೆ ಪ್ರಗತಿ ಭವನದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಲಾಕ್ ಡೌನ್ ಬಗ್ಗೆ ಕೇಂದ್ರ ಹೊರಡಿಸಿರುವ ಹೊಸ ಮಾರ್ಗಸೂಚಿಗಳು ಮತ್ತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಜೊತೆಗೆ ರಾಜ್ಯ ಸರ್ಕಾರದ ಉದ್ದೇಶಿತ ಕೃಷಿ ನೀತಿಯ ಮಾರ್ಗಸೂಚಿಗಳ ಬಗ್ಗೆಯೂ ಚರ್ಚೆ ನಡೆಯಲಿದೆ.
ದೇಶದಲ್ಲಿ ಮೇ 31 ರವರೆಗೆ ನಾಲ್ಕನೇ ಹಂತದ ಲಾಕ್ ಡೌನ್ ಘೋಷಿಸಲಾಗಿದೆ. ತೆಲಂಗಾಣದಲ್ಲಿ ಮೇ 29 ರವರೆಗೆ ಲಾಕ್ ಡೌನ್ ವಿಸ್ತರಿಸಿ ಈ ಮೊದಲೇ ಸಿಎಂ ಕೆಸಿಆರ್ ಆದೇಶಿಸಿದ್ದರು.