ಕರ್ನಾಟಕ

karnataka

ETV Bharat / bharat

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್​​ಗೆ ಭಾರತ ರತ್ನಕ್ಕೆ ಆಗ್ರಹ: ನಿರ್ಣಯಕ್ಕೆ ಮುಂದಾದ ತೆಲಂಗಾಣ ಸರ್ಕಾರ - ಹೈದರಾಬಾದ್

ನರಸಿಂಹರಾವ್ ಅವರ ಜನ್ಮ ಶತಮಾನೋತ್ಸವದ ಕುರಿತು ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೆಸಿಆರ್​​​, ಮಾಜಿ ಪ್ರಧಾನಮಂತ್ರಿಯವರ ಭಾವಚಿತ್ರವನ್ನು ಸಂಸತ್​ನಲ್ಲಿ ಸ್ಥಾಪಿಸಲು ಮತ್ತು ಹೈದರಾಬಾದ್‌ನ ಕೇಂದ್ರ ವಿಶ್ವವಿದ್ಯಾಲಯವನ್ನು ಮರು ನಾಮಕರಣ ಮಾಡುವಂತೆ ಕೇಂದ್ರವನ್ನು ಕೋರುತ್ತೇವೆ ಎಂದರು.

Telangana Assembly
ಮಾಜಿ ಪ್ರಧಾನಿ ನರಸಿಂಹ ರಾವ್ ಅವರಿಗೆ ಭಾರತ ರತ್ನವನ್ನು ನೀಡಲು ತೆಲಂಗಾಣ ವಿಧಾನಸಭೆ ನಿರ್ಣಯ

By

Published : Aug 29, 2020, 8:12 AM IST

ಹೈದರಾಬಾದ್: ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರುವ ಬಗ್ಗೆ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.

ನರಸಿಂಹರಾವ್ ಅವರ ಜನ್ಮ ಶತಮಾನೋತ್ಸವದ ಕುರಿತು ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೆಸಿಆರ್​​​, ಮಾಜಿ ಪ್ರಧಾನಮಂತ್ರಿಯವರ ಭಾವಚಿತ್ರವನ್ನು ಸಂಸತ್​ನಲ್ಲಿ ಸ್ಥಾಪಿಸಲು ಮತ್ತು ಹೈದರಾಬಾದ್‌ನ ಕೇಂದ್ರ ವಿಶ್ವವಿದ್ಯಾಲಯವನ್ನು ಮರು ನಾಮಕರಣ ಮಾಡುವಂತೆ ಕೇಂದ್ರವನ್ನು ಕೋರುತ್ತೇವೆ ಎಂದರು.

ನರಸಿಂಹರಾವ್ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುವುದಾಗಿ ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿತ್ತು. "ಪಿ.ವಿ.ನರಸಿಂಹರಾವ್ ತೆಲಂಗಾಣದ ಅಸ್ತಿತ್ವದ ಸಂಕೇತವಾಗಿದ್ದಾರೆ. ಅವರು ದೇಶದಲ್ಲಿ ಹಲವಾರು ಸುಧಾರಣೆಗಳನ್ನು ಪ್ರಾರಂಭಿಸಿದ ಸುಧಾರಕರಾಗಿದ್ದರು. ವಿಶ್ವದಾದ್ಯಂತ ಶ್ರೇಷ್ಠ ಬುದ್ಧಿಜೀವಿಗಳೆಂದು ಗುರುತಿಸಲ್ಪಟ್ಟರು. ದೇಶದ ಪ್ರಧಾನಮಂತ್ರಿ ಪಟ್ಟಕ್ಕೆ ಏರಿದ ತೆಲಂಗಾಣ ಮೂಲದವರು. ಅವರ ಹಿರಿಮೆ ಮತ್ತು ಸಾಧನೆಗಳನ್ನು ನಾವು ವಿಧಾನಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

ABOUT THE AUTHOR

...view details