ಕರ್ನಾಟಕ

karnataka

ETV Bharat / bharat

ಎಸಿಬಿ ದಾಳಿ: ಕಿಸರಾ ತಹಶೀಲ್ದಾರ್ ಬ್ಯಾಂಕ್ ಲಾಕರ್​ನಲ್ಲಿ ಸಿಕ್ತು 1.5 ಕೆಜಿ ಚಿನ್ನಾಭರಣ! - ಹೈದರಾಬಾದ್

ಕಿಸರಾ ತಹಶೀಲ್ದಾರ್ ಬ್ಯಾಂಕ್ ಲಾಕರ್‌ನಿಂದ 57.6 ಲಕ್ಷ ರೂ. ಮೌಲ್ಯದ 1.5 ಕೆಜಿ ಚಿನ್ನದ ಆಭರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Gold seized
ಕಿಸರಾ ತಹಶೀಲ್ದಾರ್ ಬ್ಯಾಂಕ್ ಲಾಕರ್​ನಿಂದ ಚಿನ್ನಾಭರಣ ವಶ

By

Published : Sep 3, 2020, 8:33 AM IST

ಹೈದರಾಬಾದ್: ಕಿಸರಾದ ತಹಶೀಲ್ದಾರ್ ಬ್ಯಾಂಕ್​ ಲಾಕರ್‌ ಶೋಧದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು 57.6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಸದ್ಯ ಆರೋಪಿ ತಹಶೀಲ್ದಾರ್​​ನನ್ನು ಬಂಧಿಸಲಾಗಿದ್ದು, ಚಂಚಲ್‌ಗುಡಾದ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಆ. 14ರಂದು ತಹಶೀಲ್ದಾರ್ ಎರ್ವಾ ಬಲರಾಜು ನಾಗರಾಜು ಮನೆಯಲ್ಲಿ ಶೋಧದ ವೇಳೆ ಬ್ಯಾಂಕ್ ಲಾಕರ್‌ನ ಕೀಲಿಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಎಸಿಬಿ ತಿಳಿಸಿದೆ.

ಕೀಲಿಗಳು ಸಿಕಂದರಾಬಾದ್ (ಶಾಖೆ) ಅಲ್ವಾಲ್‌ನಲ್ಲಿರುವ ಬ್ಯಾಂಕ್​ನ‌ ಲಾಕರ್‌ನದ್ದಾಗಿತ್ತು. ತಹಶೀಲ್ದಾರ್‌ಗೆ ಸಂಬಂಧಿಸಿದ ಜಿ.ಜೆ. ಲಾಕರ್‌ ಶೋಧದ ವೇಳೆ 57.6 ಲಕ್ಷ ರೂ. ಮೌಲ್ಯದ 1,532 ಗ್ರಾಂ ತೂಕದ ಚಿನ್ನದ ಆಭರಣಗಳು ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಆಭರಣಗಳನ್ನು ಹೈದರಾಬಾದ್‌ನ ಎಸ್‌ಪಿಇ ಮತ್ತು ಎಸಿಬಿ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಇರಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ABOUT THE AUTHOR

...view details