ಕರ್ನಾಟಕ

karnataka

ETV Bharat / bharat

ಸರ್ಕಾರಕ್ಕೆ 2000 ಬಸ್ ನೀಡಲು ತೇಜಸ್ವಿ ಯಾದವ್ ಸಿದ್ಧ: ಆರ್‌ಜೆಡಿ ವಕ್ತಾರ - 2000 bus to bihar govt

ದೇಶದ ವಿವಿಧ ಭಾಗಗಳಲ್ಲಿ ಸುಮಾರು 25 ಲಕ್ಷ ಬಿಹಾರದ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನೆಲ್ಲಾ ಮರಳಿ ಕರೆತರಲು ಬಿಹಾರ ಸರ್ಕಾರ ಅಸಮರ್ಥತೆ ವ್ಯಕ್ತಪಡಿಸಿದೆ. ಆದರೆ, ಈ ನಿಟ್ಟಿನಲ್ಲಿ ನೆರವಾಗಲು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಮುಂದೆ ಬಂದಿದ್ದಾರೆ. ಅವರು ತಮ್ಮ 2000 ಬಸ್​​​ ಗಳನ್ನು ಬಿಹಾರ ಸರ್ಕಾರಕ್ಕೆ ನೀಡಲು ಸಿದ್ಧರಾಗಿದ್ದಾರೆ ಎಂದು ಮನೋಜ್​ ಝಾ ತಿಳಿಸಿದರು.

Tejashwi Yadav is ready to give 2000 bus to Bihar govt: RJD spokesperson
ಬಿಹಾರ ಸರ್ಕಾರಕ್ಕೆ 2000 ಬಸ್ ನೀಡಲು ಪ್ರತಿಪಕ್ಷ ನಾಯಕ ತೇಜಶ್ವಿ ಯಾದವ್ ಸಿದ್ಧ: ಆರ್‌ಜೆಡಿ ವಕ್ತಾರ

By

Published : May 1, 2020, 2:37 PM IST

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಮತ್ತು ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಬಿಹಾರ ಸರ್ಕಾರಕ್ಕೆ 2000 ಬಸ್​​​​​ಗಳನ್ನು ನೀಡಲು ಬಿಹಾರ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಸಿದ್ಧರಾಗಿದ್ದಾರೆ ಎಂದು ರಾಷ್ಟ್ರೀಯ ಜನತಾದಳದ ವಕ್ತಾರ ಮನೋಜ್ ಝಾ ಗುರುವಾರ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಹಾರ ಸಂಸದ ಮತ್ತು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ವಕ್ತಾರ ಮನೋಜ್, ದೇಶದ ವಿವಿಧ ಭಾಗಗಳಲ್ಲಿ ಸುಮಾರು 25 ಲಕ್ಷ ಬಿಹಾರದ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನೆಲ್ಲ ಮರಳಿ ಕರೆತರಲು ಬಿಹಾರ ಸರ್ಕಾರ ಅಸಮರ್ಥತೆ ವ್ಯಕ್ತಪಡಿಸಿದೆ. ಆದರೆ, ಈ ನಿಟ್ಟಿನಲ್ಲಿ ನೆರವಾಗಲು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಮುಂದೆ ಬಂದಿದ್ದಾರೆ. ಅವರು ತಮ್ಮ 2000 ಬಸ್​​​​ಗ​​​ಳನ್ನು ಬಿಹಾರ ಸರ್ಕಾರಕ್ಕೆ ನೀಡಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.

ಇನ್ನು ಈ ವಿಚಾರವನ್ನು ಬಿಹಾರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇತರ ರಾಜ್ಯಗಳಲ್ಲಿ ಸಿಕ್ಕಿಬಿದ್ದಿರುವ ಬಿಹಾರದ ಜನರು ತುಂಬಾ ತೊಂದರೆಯಲ್ಲಿದ್ದಾರೆ. ಬಿಹಾರ ಸರ್ಕಾರ ಎಲ್ಲರ ನೋವನ್ನು ಅರ್ಥಮಾಡಿಕೊಳ್ಳಬೇಕು. ಈಗ ಬಿಹಾರ ಸರ್ಕಾರ ಈ ವಿಷಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ವಲಸೆ ಬಂದ ಕಾರ್ಮಿಕರನ್ನು ಮತ್ತು ವಿದ್ಯಾರ್ಥಿಗಳನ್ನು ಮರಳಿ ಕರೆತರಲು ರಾಜ್ಯ ಸರ್ಕಾರಕ್ಕೆ ಸಾಕಷ್ಟು ಬಸ್​​​​​​ಳಿಲ್ಲ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಬುಧವಾರ ಸ್ಪಷ್ಟಪಡಿಸಿದ್ದಾರೆ.

ವರದಿಯ ಪ್ರಕಾರ, ಬಿಹಾರದ ಹೊರಗೆ 25 ಲಕ್ಷ ಬಿಹಾರ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ ಮತ್ತು ಸಾಮಾಜಿಕ ದೂರ ಇಡುವ ನಿಯಮಗಳನ್ನು ಅನುಸರಿಸಿ ಇವರೆಲ್ಲರನ್ನೂ ಬಿಹಾರಕ್ಕೆ ಕರೆತಂದರೆ, 1.70 ಲಕ್ಷ ಬಸ್​​​​​ ಗಳು ಬೇಕಾಗುತ್ತವೆ ಮತ್ತು ಬಿಹಾರದಲ್ಲಿ ಅಷ್ಟೊಂದು ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ABOUT THE AUTHOR

...view details