ಪಾಟ್ನಾ: ಬಿಹಾರ ವಿಧಾನಸಭೆಯ ಅವಧಿ ಮುಗಿಯುವವರೆಗೂ ಶಾಸಕರಾಗಿ ತಮ್ಮ ಸಂಬಳದ ಶೇ.50ರಷ್ಟು ಹಣವನ್ನು ಕೊರೊನಾ ವೈರಸ್ ನಿರ್ಮೂಲನಾ ನಿಧಿಗೆ ನೀಡುವುದಾಗಿ ಪ್ರತಿಪಕ್ಷ ನಾಯಕ ತೇಜಶ್ವಿ ಯಾದವ್ ಶುಕ್ರವಾರ ಪ್ರಕಟಿಸಿದ್ದಾರೆ. ಅವರ ಶಾಸಕ ಸ್ಥಾನದ ಅವಧಿ ಇದೇ ನವೆಂಬರ್ನಲ್ಲಿ ಕೊನೆಯಾಗಲಿದೆ. ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ವಿಧಾನಸಭೆ ಅವಧಿಯ ಅರ್ಧ ವೇತನ ಕೊರೊನಾ ನಿಧಿಗೇ ನೀಡಿದ ಆರ್‌ಜೆಡಿಎಯ ತೇಜಸ್ವಿ ಯಾದವ್.. - ಪಾಟ್ನಾ ನ್ಯೂಸ್
ಬಿಹಾರ ಸರ್ಕಾರ ಶೇ.15ರಷ್ಟು ಶಾಸಕರ ವೇತನವನ್ನು ಕೊರೊನಾ ವೈರಸ್ ನಿರ್ಮೂಲನಾ ನಿಧಿಗೆ ಜಮಾ ಮಾಡಲು ನಿರ್ಧರಿಸಿದೆ. ಆದರೆ, ನನ್ನ ಉಳಿದಿರುವ ಅಸೆಂಬ್ಲಿ ಅವಧಿಯ ವೇತನದ ಶೇ.50ರಷ್ಟನ್ನು ಕೊರೊನಾ ವಿರುದ್ಧ ಹೋರಾಡುವ ದೃಷ್ಟಿಯಿಂದ ನೀಡಲು ಇಚ್ಚಿಸಿದ್ದೇನೆ ಎಂದಿದ್ದಾರೆ.
![ವಿಧಾನಸಭೆ ಅವಧಿಯ ಅರ್ಧ ವೇತನ ಕೊರೊನಾ ನಿಧಿಗೇ ನೀಡಿದ ಆರ್‌ಜೆಡಿಎಯ ತೇಜಸ್ವಿ ಯಾದವ್.. Tejashwi to contribute half of his salary to corona fund till end of Assembly's term](https://etvbharatimages.akamaized.net/etvbharat/prod-images/768-512-6739681-170-6739681-1586518839548.jpg)
ಕೊರೊನಾ: ಅರ್ಧ ವೇತನ ಕೊರೊನಾ ನಿಧಿಗೆ ನೀಡಿದ- ತೇಜಸ್ವಿ ಯಾದವ್
ಇನ್ನೂ ಬಿಹಾರದಲ್ಲಿ ಈವರೆಗೆ 60 ಕೊರೊನಾ ಪ್ರಕರಣಗಳು ಒಂದು ಸಾವಿನೊಂದಿಗೆ ವರದಿಯಾಗಿದೆ. ಬಿಹಾರ ಸರ್ಕಾರ ಶೇ.15ರಷ್ಟು ಶಾಸಕರ ವೇತನವನ್ನು ಕೊರೊನಾ ವೈರಸ್ ನಿರ್ಮೂಲನಾ ನಿಧಿಗೆ ಜಮಾ ಮಾಡಲು ನಿರ್ಧರಿಸಿದೆ. ಆದರೆ, ನನ್ನ ಉಳಿದಿರುವ ಅಸೆಂಬ್ಲಿ ಅವಧಿಯ ವೇತನದ ಶೇ.50ರಷ್ಟನ್ನು ಕೊರೊನಾ ವಿರುದ್ಧ ಹೋರಾಡುವ ದೃಷ್ಟಿಯಿಂದ ನೀಡಲು ಇಚ್ಚಿಸಿದ್ದೇನೆ ಎಂದಿದ್ದಾರೆ.
ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಾದವ್ ತಮ್ಮ ಅಧಿಕೃತ ಬಂಗಲೆಯನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರ ಬಯಸಿದಂತೆ ಬಳಸಲು ನೀಡಿದ್ದರು.