ಕರ್ನಾಟಕ

karnataka

ETV Bharat / bharat

ಬಿಹಾರ ಚುನಾವಣೆ.. 2ನೇ ಹಂತದಲ್ಲಿ ಕಣಕ್ಕಿಳಿದಿದ್ದಾರೆ ನಿತೀಶ್ ಸರ್ಕಾರದ 4 ಮಂತ್ರಿಗಳು - ಪ್ರತಿಪಕ್ಷ ಗ್ರ್ಯಾಂಡ್ ಅಲೈಯನ್ಸ್‌ನ ಮುಖ್ಯಮಂತ್ರಿ ಅಭ್ಯರ್ಥಿ

ಬಿಹಾರ ರಾಜಧಾನಿ ಪಾಟ್ನಾ ಸಾಹಿಬ್, ಕುಮ್ರಾರ್, ಬಂಕಿಪುರ್​ ಮತ್ತು ದಿಘಾದಲ್ಲಿನ ಎಲ್ಲಾ ನಾಲ್ಕು ವಿಧಾನಸಭಾ ವಿಭಾಗಗಳು ಸಹ ನಾಳೆ ಎರಡನೇ ಹಂತದ ಮತದಾನ ನಡೆಯಲಿದೆ..

Tejashwi, 4 ministers of Nitish govT in fray in 2nd phase
ಬಿಹಾರ ಚುನಾವಣೆ: 2 ನೇ ಹಂತದಲ್ಲಿ ಕಣಕ್ಕಿಳಿದಿದ್ದಾರೆ ನಿತೀಶ್ ಸರ್ಕಾರದ 4 ಮಂತ್ರಿಗಳು

By

Published : Nov 2, 2020, 12:59 PM IST

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೂರು ಹಂತಗಳಲ್ಲಿ ಎರಡನೆಯ ಮತ್ತು ಅತ್ಯಂತ ನಿರ್ಣಾಯಕ ಘಟ್ಟವನ್ನು ನಿಗದಿಪಡಿಸಲಾಗಿದೆ. ಮಂಗಳವಾರದಂದು 2.85 ಕೋಟಿ ಮತದಾರರು ಸುಮಾರು 1,500 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ನವೆಂಬರ್ 3 ರಂದು 94 ಅಸೆಂಬ್ಲಿ ವಿಭಾಗಗಳಲ್ಲಿ ಮತದಾನ ನಡೆಯಲಿದ್ದು, 17 ಜಿಲ್ಲೆಗಳ 243 ಬಲಿಷ್ಠ ವಿಧಾನಸಭೆಯ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಭಾಗವಿದೆ. ಇವೆಲ್ಲವನ್ನು ಹೊರತುಪಡಿಸಿ ಪಾಟ್ನಾ, ಭಾಗಲ್ಪುರ್ ಮತ್ತು ನಳಂದ ಇವು ಗಂಗೆಯ ಉತ್ತರದಲ್ಲಿವೆ.

ಅಭ್ಯರ್ಥಿಗಳಲ್ಲಿ ಗಮನಾರ್ಹವಾದವರು ಆರ್‌ಜೆಡಿಯ ತೇಜಶ್ವಿ ಯಾದವ್, ಇವರು ಪ್ರತಿಪಕ್ಷ ಗ್ರ್ಯಾಂಡ್ ಅಲೈಯನ್ಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಅವರು, ನಿತೀಶ್ ಕುಮಾರ್ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಂಶವನ್ನು ಬಳಸಿ ಅಧಿಕಾರಕ್ಕೇರಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ.

ವೈಶಾಲಿ ಜಿಲ್ಲೆಯ ರಾಘೋಪುರದಿಂದ ಬಿಜೆಪಿಯ ಸತೀಶ್ ಕುಮಾರ್ ಸ್ಪರ್ಧೆ ಮಾಡಿದ್ದು ಇವರ ವಿರುದ್ಧ ಮಹಾಘಟಬಂಧನ್​ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್​ ಕಣಕ್ಕಿಳಿದಿದ್ದಾರೆ.

2010ರಲ್ಲಿ ಸತೀಶ್​ ಕುಮಾರ್​ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ತೇಜಸ್ವಿಯವರ ತಾಯಿ ರಾಬ್ರಿ ದೇವಿ ಅವರನ್ನು ಸೋಲಿಸಿದ್ದರು. ತೇಜಸ್ವಿಯ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಸಮಸ್ತಿಪುರ ಜಿಲ್ಲೆಯ ಹಸನ್ಪುರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ.

ರಾಜಧಾನಿ ಪಾಟ್ನಾ ಸಾಹಿಬ್, ಕುಮ್ರಾರ್, ಬಂಕಿಪುರ್​ ಮತ್ತು ದಿಘಾದಲ್ಲಿನ ಎಲ್ಲಾ ನಾಲ್ಕು ವಿಧಾನಸಭಾ ವಿಭಾಗಗಳು ಸಹ ಎರಡನೇ ಹಂತದಲ್ಲಿ ಮತದಾನ ಮಾಡಲಿವೆ.

ABOUT THE AUTHOR

...view details