ಕರ್ನಾಟಕ

karnataka

ETV Bharat / bharat

'ಊಟ ನೀಡದೆ ಗಂಡನ ಮನೆಯಲ್ಲಿ ಕಿರುಕುಳ'... ಮೀಸಾ ಭಾರ್ತಿ, ರಾಬ್ರಿ ದೇವಿ ವಿರುದ್ಧ ಐಶ್ವರ್ಯ ಆಕ್ರೋಶ - ಲಾಲು ಪ್ರಸಾದ್ ಯಾದವ್ ಸೊಸೆ ಐಶ್ವರ್ಯ

ಐಶ್ವರ್ಯ ಜೊತೆಗೆ ವೈವಾಹಿಕ ಜೀವನ ಸರಿಹೋಗುತ್ತಿಲ್ಲ ಎಂದು ಕಾರಣ ನೀಡಿ ಪತಿ ತೇಜ್​​ ಪ್ರತಾಪ್ ಡಿವೋರ್ಸ್​ಗಾಗಿ ಈಗಾಗಲೇ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದು ಇನ್ನೂ ಇತ್ಯರ್ಥವಾಗಿಲ್ಲ.

ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತೇಜ್​ ಪ್ರತಾಪ್ ಪತ್ನಿ ಐಶ್ವರ್ಯ

By

Published : Sep 29, 2019, 9:40 PM IST

ಪಾಟ್ನಾ:ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೊಸೆ ಐಶ್ವರ್ಯ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದು, ನಾದಿನಿ ಮೀಸಾ ಭಾರ್ತಿಯ ಮೇಲೆ ನೇರ ಆರೋಪ ಮಾಡಿದ್ದಾಳೆ.

ಐಶ್ವರ್ಯ ಜೊತೆಗೆ ವೈವಾಹಿಕ ಜೀವನ ಸರಿಹೋಗುತ್ತಿಲ್ಲ ಎಂದು ಕಾರಣ ನೀಡಿ ಪತಿ ತೇಜ್​​ ಪ್ರತಾಪ್ ಡಿವೋರ್ಸ್​ಗಾಗಿ ಈಗಾಗಲೇ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದು ಇನ್ನೂ ಇತ್ಯರ್ಥವಾಗಿಲ್ಲ.

ತಮ್ಮ ಹೆತ್ತವರ ಜೊತೆಗೆ ಮಾಧ್ಯಮದ ಮುಂದೆ ಮಾತನಾಡಿದ ಐಶ್ವರ್ಯ, ಕೌಟುಂಬಿಕ ಕಲಹಕ್ಕೆ ಮೀಸಾ ಭಾರ್ತಿ ಮೂಲ ಕಾರಣ ಎಂದಿದ್ದಾಳೆ. ಕಳೆದ ಮೂರು ತಿಂಗಳಿನಿಂದ ಗಂಡನ ಮನೆಯಲ್ಲಿ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದು, ಅತ್ತೆ ರಾಬ್ರಿ ದೇವಿ ಸರಿಯಾದ ಆಹಾರವನ್ನೇ ನೀಡುತ್ತಿಲ್ಲ. ಸದ್ಯ ಅಡುಗೆ ಕೋಣೆಗೂ ನಿರ್ಬಂಧ ಹೇರಿದ್ದಾರೆ ಎಂದು ಐಶ್ವರ್ಯ ದೂರಿದ್ದಾಳೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಶ್ವರ್ಯ

ಸಹೋದರರ ಮಧ್ಯೆ ಗಲಾಟೆ ಉದ್ಭವಿಸುವಂತೆ ಮೀಸಾ ಭಾರ್ತಿ ವರ್ತಿಸುತ್ತಿದ್ದು, ಸದ್ಯದ ಬೆಳವಣಿಗೆಯಲ್ಲಿ ಆಕೆಯದ್ದೇ ಹೆಚ್ಚಿನ ಪಾಲು ಇದೆ ಎಂದು ಐಶ್ವರ್ಯ ಆಕ್ರೋಶ ಹೊರಹಾಕಿದ್ದಾಳೆ.

ಕಳೆದ ಮೇ ತಿಂಗಳಲ್ಲಿ ತೇಜ್​ ಪ್ರತಾಪ್ ಯಾದವ್ ಐಶ್ವರ್ಯಳನ್ನು ವರಿಸಿದ್ದ. ಆದರೆ ಆರೇ ತಿಂಗಳಲ್ಲಿ ಈ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಲಾಲು ಪ್ರಸಾದ್ ಯಾದವ್ ಅನುಪಸ್ಥಿತಿಯಿಂದ ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯ ಸರಿಹೋಗಿಲ್ಲ ಎಂದು ಐಶ್ವರ್ಯ ಹೇಳಿದ್ದಾಳೆ.

ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತೇಜ್​ ಪ್ರತಾಪ್ ಪತ್ನಿ ಐಶ್ವರ್ಯ

ಬಹುಕೋಟಿ ಮೇವು ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿರುವ ಲಾಲು ಪ್ರಸಾದ್ ಯಾದವ್ ಸದ್ಯ ಆರೋಗ್ಯ ಹದಗೆಟ್ಟ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details