ಪಾಟ್ನಾ:ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರ ವೈರಲ್ ಆಗುತ್ತಿದೆ.
ತೇಜ್ ಪ್ರತಾಪ್ ಅವರ ಪತ್ರದಲ್ಲಿ 6 ತಪ್ಪುಗಳಿವೆ. ಜನವರಿ 25 ರಂದು ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ 6 ತಪ್ಪುಗಳು ಕಂಡುಬಂದಿವೆ. ಹಿಂದಿಯಲ್ಲಿ ಬರೆದ ಈ ಪತ್ರದಲ್ಲಿ ತಪ್ಪುಗಳಿದ್ದು, ಇದೇ ವಿಷಯಕ್ಕೆ ತೇಜ್ ಪ್ರತಾಪ್ ಅವರ ಪತ್ರ ವೈರಲ್ ಆಗುತ್ತದೆ. ಗರಿಬೋ (गरीबों) ಎಂದು ಬರೆಯುವಲ್ಲಿ ಗರಿವೋ (गरीवों), ವಂಚಿತ (वंचित ) ಎಂಬಲ್ಲಿ ಬಂಚಿತ (बंचति), ಮಸೀಹಾ (मसीहा) ಎಂದು ಬರೆಯುವಲ್ಲಿ ಮಸಿಹಾ (मसिहा), ಆದರಣೀಯ (आदरणीय) ಎಂಬಲ್ಲಿ ಆಪರಣೀಯ (आपरणीय), ಲಾಲೂ (लालू) ಎಂಬಲ್ಲಿ ಲಾಲು (लालु), ಮೂಲ್ಯೊ (मूल्यों) ಎಂದು ಬರೆಯುವಲ್ಲಿ ಮುಲ್ಯೊ (मुल्यों) ಎಂದು ಬರೆಯಲಾಗಿದೆ.