ಶ್ರೀನಗರ:ಕಾಶ್ಮೀರದ ಪ್ರತ್ಯೇಕತಾವಾದಿ ಪಕ್ಷವಾಗಿರುವ ತೆಹ್ರೀಕ್-ಎ-ಹುರಿಯತ್ನ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಸೆಹ್ರಾಯ್ರನ್ನು ಪೊಲೀಸರು ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಘಾತ್ ಬಾರ್ಜುಲ್ಲಾದಲ್ಲಿರುವ ಅಶ್ರಫ್ ನಿವಾಸದಲ್ಲಿ ಪೊಲೀಸರು ಇಂದು ಬೆಳಿಗ್ಗೆ ಅರೆಸ್ಟ್ ಮಾಡಿದ್ದು, ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.