ಮುಜಾಫರ್ನಗರ(ಉತ್ತರ ಪ್ರದೇಶ):ಕೋತಿಗಳು ಬೆನ್ನಟ್ಟಿದ್ದರಿಂದ ಬಾಲಕಿಯೊಬ್ಬಳು ಮನೆಯ ಛಾವಣಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಮುಜಾಫರ್ನಗರ ಜಿಲ್ಲೆಯ ನೋಲಿ ಗ್ರಾಮದಲ್ಲಿ ನಡೆದಿದೆ.
ಬೆನ್ನಟ್ಟಿದ ಕಪಿ ಸೇನೆ: ಮನೆ ಛಾವಣಿಯಿಂದ ಬಿದ್ದು ಬಾಲಕಿ ಸಾವು - ಭೋಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಕೋತಿಗಳ ಗುಂಪೊಂದು 13 ವರ್ಷದ ಬಾಲಕಿಯೊಬ್ಬಳನ್ನು ಬೆನ್ನಟ್ಟಿ ಬಂದಿದ್ದರಿಂದ ಆಕೆ ಮನೆಯ ಛಾವಣಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಮುಜಾಫರ್ನಗರದಲ್ಲಿ ನಡೆದಿದೆ.
![ಬೆನ್ನಟ್ಟಿದ ಕಪಿ ಸೇನೆ: ಮನೆ ಛಾವಣಿಯಿಂದ ಬಿದ್ದು ಬಾಲಕಿ ಸಾವು crime](https://etvbharatimages.akamaized.net/etvbharat/prod-images/768-512-9247274-600-9247274-1603196447679.jpg)
ಸಾವು
ಮನೆ ಛಾವಣಿಯಲ್ಲಿ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಬಾಲಕಿ ಹೋಗಿದ್ದ ಸಂದರ್ಭ ಕೋತಿಗಳ ಗುಂಪೊಂದು ಆಕೆಯನ್ನು ಅಟ್ಟಾಡಿಸಿಕೊಂಡು ಬಂದಿದೆ. ಬೆದರಿದ ಬಾಲಕಿ ಕಂಗಾಲಾಗಿದ್ದಾಳೆ. ದಾರಿ ತೋಚದೇ ಓಡುವಾಗ ಮೇಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ದಾರಿ ಮಧ್ಯೆ ಆಕೆಯ ಪ್ರಾಣ ಹಾರಿಹೋಗಿತ್ತು. ಮೃತ ಬಾಲಕಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಈ ಘಟನೆ ಭೋಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.