ಕರ್ನಾಟಕ

karnataka

ETV Bharat / bharat

'ಮಹಾ' ಸರ್ಕಾರ ರಚನೆಯಿಂದ ಟೀಚರ್​ ಶಾಕ್, ಒಂದು ದಿನದ ರಜೆಗೆ ಪ್ರಾಂಶುಪಾಲರಿಗೆ ಪತ್ರ! - ಮಹಾರಾಷ್ಟ್ರ ಸರ್ಕಾರ ರಚನೆ ಸುದ್ದಿ

ನಿನ್ನೆ ಬೆಳ್ಳಂಬೆಳಗ್ಗೆ ಮಹಾರಾಷ್ಟ್ರ ಸರ್ಕಾರ ರಚನೆಯ ದಿಢೀರ್​ ಬೆಳವಣಿಗೆಯಿಂದ ಶಾಕ್​ ಆಗದವರಿಲ್ಲ. ದೇವೇಂದ್ರ ಫಡ್ನವೀಸ್​ ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಇಲ್ಲಿನ ಶಾಲಾ ಶಿಕ್ಷಕರೊಬ್ಬರು ಮಾಡಿದ್ದೇನು ಗೊತ್ತಾ!

ಒಂದು ದಿನದ ರಜೆಗೆ ಪ್ರಾಂಶುಪಾಲರಿಗೆ ಪತ್ರ

By

Published : Nov 24, 2019, 10:23 AM IST

ಚಂದ್ರಾಪುರ್​(ಮಹಾರಾಷ್ಟ್ರ):ಚಂದ್ರಾಪುರ್ ಜಿಲ್ಲೆಯ ಘರ್​ಚಂದ್​ಪುರದಲ್ಲಿರುವ ಸಾವಿತ್ರಿ ಬಾಯಿ ಫುಲೆ ಜೂನಿಯರ್​ ಕಾಲೇಜಿನ ಇಂಗ್ಲೀಷ್​ ಶಿಕ್ಷಕ ಝಹೀರ್​ ಸಯ್ಯದ್​, ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಾದ ದಿಢೀರ್​ ಬೆಳವಣಿಗೆಯಿಂದ ಶಾಕ್​ ಆಗಿದ್ದಾರೆ.

ರಾತ್ರಿ ಬೆಳಗಾಗೋದ್ರೊಳಗೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಅರಗಿಸಿಕೊಳ್ಳಲಾಗದ ಇವರು, ತನಗೆ ಒಂದು ದಿನ ರೆಸ್ಟ್​ ಬೇಕು ಎಂದು ಪ್ರಾಂಶುಪಾಲರಿಗೆ ಪತ್ರ ಬರೆದು ರಜೆ ಕೇಳಿದ್ದಾರೆ. ಆದರೆ ಝಹೀರ್​ ಸಯ್ಯದ್ ರಜಾ ಅರ್ಜಿಯನ್ನು ಪ್ರಾಂಶುಪಾಲರು ಸ್ವೀಕರಿಸಿಲ್ಲ.

ಪ್ರಾಂಶುಪಾಲರಿಗೆ ಬರೆದ ಪತ್ರ

ತಾನು ಸರ್ಕಾರ ರಚನೆಯಿಂದ ಅಚ್ಚರಿಗೊಂಡು ರಜೆ ಕೇಳಿದ್ದೇನೆ ಎಂದು ಝಹೀರ್​ ಸಯ್ಯದ್ ಹೇಳಿಕೊಂಡಿದ್ದಾರೆ.

ABOUT THE AUTHOR

...view details