ಕರ್ನಾಟಕ

karnataka

ETV Bharat / bharat

ಪ್ರಧಾನಿ ಭೇಟಿಗೆ ಸೈಕಲ್​ ಏರಿ 2000 ಕಿ.ಮೀ. ಕ್ರಮಿಸಿದ 'ಮಾದರಿ ಶಿಕ್ಷಕಿ'! - ಆಗ್ರಾ ಸುದ್ದಿ

ಮಹಿಳೆಯರ ರಕ್ಷಣೆ ಮತ್ತು ಗೋ ಮಾತೆಯ ರಕ್ಷಣೆ ಸಂಬಂಧ ಕಾನೂನು ರೂಪಿಸುವಂತೆ ಮನವಿ ಮಾಡಲು ಶಿಕ್ಷಕಿವೋರ್ವರು ಹೈದರಾಬಾದ್​ನಿಂದ ದೆಹಲಿಗೆ ಸೈಕಲ್​ನಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಮಾಧವಿ ಲತಾ
ಮಾಧವಿ ಲತಾ

By

Published : Dec 24, 2020, 9:00 AM IST

ಆಗ್ರಾ(ಉತ್ತರ ಪ್ರದೇಶ):ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಉದ್ದೇಶದಿಂದ ಮಾದರಿ ಶಿಕ್ಷಕಿವೋರ್ವರು ತೆಲಂಗಾಣದ ರಾಜಧಾನಿ ಹೈದರಾಬಾದ್​ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಸೈಕಲ್​ನಲ್ಲೇ ಪ್ರಯಾಣ ಬೆಳೆಸಿದ್ದಾರೆ. ಶಿಕ್ಷಕಿ ಮಾಧವಿ ಲತಾ ಅವರನ್ನು ಆಗ್ರಾದ ಗೋರಕ್ಷ ಕ್ರಾಂತಿ ಸದಸ್ಯರು ಸ್ವಾಗತಿಸಿದ್ದಾರೆ.

ಮಹಿಳೆಯರ ರಕ್ಷಣೆ ಮತ್ತು ಗೋ ಮಾತೆಯ ರಕ್ಷಣೆ ಸಂಬಂಧ ಕಾನೂನು ರೂಪಿಸುವಂತೆ ಮನವಿ ಮಾಡಲು ಪ್ರಧಾನಿ ಭೇಟಿಗೆ ಬಂದಿದ್ದೇನೆ ಎಂದು ಮಾಧವಿ ಹೇಳಿದ್ದಾರೆ.

ನವೆಂಬರ್​ 12 ರಂದು ಏಕಾಂಗಿಯಾಗಿ ಸೈಕಲ್​ ಮೂಲಕ ಸವಾರಿ ಪ್ರಾರಂಭಿಸಿದ್ದಾರೆ. ಸುಮಾರು 2000 ಕಿ.ಮೀ. ಸೈಕಲ್​ ಮೂಲಕವೇ ಪ್ರಯಾಣ ಬೆಳೆಸಿದ ಮಾಧವಿಯವರನ್ನು ಅಲ್ಲಿನ ಗೋರಕ್ಷ ಕ್ರಾಂತಿಯ ರಾಷ್ಟ್ರೀಯ ಅಧ್ಯಕ್ಷ ಜ್ಞಾನೇಂದ್ರ ಸಿಂಗ್ ಮುಖಿಯಾ, ನೀರಜ್ ಶರ್ಮಾ, ಪ್ರಮೋದ್ ಲವಾನಿಯಾ, ರಾಮು ಫೌಜ್ದಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಸ್ವಾಗತಿಸಿ, ಅವರಿಗೆ ಬೆಂಬಲ ಸೂಚಿಸಿದರು.

ABOUT THE AUTHOR

...view details