ನವದೆಹಲಿ: ವೇತನ ನೀಡಿಲ್ಲವೆಂದು ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಶಾಲೆಗಳ ಶಿಕ್ಷಕರು ಪ್ರತಿಭಟಿಸುತ್ತಿದ್ದಾರೆ. ಈ ಮಧ್ಯೆ ನಗರದ ಜ್ಯೋತಿ ಕಾಲೋನಿಯ ಹರ್ಕಿಶನ್ ಶಾಲೆಯ ಶಿಕ್ಷಕರು ಬಾಕಿ ವೇತನ ನೀಡುವಂತೆ ಆಗ್ರಹಿಸಲು ಶಾಲಾ ಆಡಳಿತ ಮಂಡಳಿ ಮುಂದೆ ಹಾಜರಾಗಲು ಪೊಲೀಸ್ ಭದ್ರತೆ ಕೋರಿದ್ದಾರೆ.
ಶಾಲಾ ಆಡಳಿತ ಮಂಡಳಿ ಮುಂದೆ ಹಾಜರಾಗಲು ಪೊಲೀಸ್ ಭದ್ರತೆ ಕೋರಿದ ಶಿಕ್ಷಕ
ದೆಹಲಿಯ ಈಶಾನ್ಯ ವಿಭಾಗ ಡಿಸಿಪಿಗೆ ಇ-ಮೇಲ್ ಮಾಡಿರುವ ಶಿಕ್ಷನೋರ್ವ ಬಾಕಿ ವೇತನದ ಬಗ್ಗೆ ಮಾತುಕತೆ ನಡೆಸಲು ಶಾಲಾ ಆಡಳಿತ ಮಂಡಳಿ ಮುಂದೆ ಹೋಗಲು ಭದ್ರತೆ ನೀಡುವಂತೆ ಕೋರಿದ್ದಾರೆ.
ಈಶಾನ್ಯ ಡಿಸಿಪಿಗೆ ಇ-ಮೇಲ್ ಮಾಡಿರುವ ಶಿಕ್ಷಕ ಜಸ್ವಂತ್ ಕೌರ್, ಬಾಕಿ ವೇತನದ ಬಗ್ಗೆ ಪ್ರಾಂಶುಪಾಲರೊಂದಿಗೆ ಮಾತನಾಡಲು ಪ್ರಯತ್ನಿಸಿದಾಗಲೆಲ್ಲಾ ಅವರು ವೇತನ ಪಾವತಿಸಲು ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಜುಲೈ 13ರಂದು ವೇತನದ ವಿಚಾರವಾಗಿ ನಾವು ಆಡಳಿತ ಮಂಡಳಿಯನ್ನು ಭೇಟಿಯಾಗಲು ಹೋಗುತ್ತೇವೆ. ಈ ವೇಳೆ ಯಾವುದೇ ಸಮಸ್ಯೆಯಾಗಬಾರದೆಂದು ಭದ್ರತೆ ಕೋರಿ ನಾವು ಪೊಲೀಸರಿಗೆ ಅರ್ಜಿ ನೀಡಿದ್ದೆವು. ಅವರು ಸ್ವೀಕರಿಸಿಲ್ಲ. ಆದ್ದರಿಂದ ಭದ್ರತೆ ನೀಡುವಂತೆ ಕೋರಿದ್ದಾರೆ.
ಈ ಮೊದಲು ಇದೇ ಶಿಕ್ಷಕ ವೇತನ ಸಿಗದಿದ್ದರೆ ತನ್ನ ಕಿಡ್ನಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.