ಕರ್ನಾಟಕ

karnataka

ETV Bharat / bharat

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನ ಬಂಧನ! - ತೆಲಂಗಾಣದಲ್ಲಿ ಶಿಕ್ಷಕನ ಬಂಧನ

ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್​ನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ. ಲಕ್ಷ್ಮೀದೇವ್‌ಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

Teacher arrested for sexual assault of five minor girls in Telangana's Bhadradri Kothagudem
ಸಾಂದರ್ಭಿಕ ಚಿತ್ರ

By

Published : Dec 17, 2020, 5:32 PM IST

ಭದ್ರಾದ್ರಿಕೊಥಗುಡೆಮ್ (ತೆಲಂಗಾಣ): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಶಿಕ್ಷಕನನ್ನು ಬಂಧಿಸಿದ ಘಟನೆ ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್‌ನಲ್ಲಿ ನಡೆದಿದೆ.

ದೂರವಾಣಿ ಮೂಲಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಭದ್ರಾದ್ರಿ ಕೊಥಗುಡೆಮ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸುನೀಲ್​ ದತ್​, ಲಕ್ಷ್ಮೀದೇವ್‌ಪಲ್ಲಿ ಮಂಡಲದ ಚಿಂತಾವರೆ ಗ್ರಾಮದಲ್ಲಿನ ಶಾಲೆಯೊಂದರ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕ ದೋಡಾ ಸುನೀಲ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಟ್ಯೂಷನ್​ಗೆ ಬರುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ

ಬಾಲಕಿಯರ ಪೋಷಕರೊಬ್ಬರು ಈ ಬಗ್ಗೆ ದೂರು ನೀಡಿದ್ದರು. ತನಿಖೆ ವೇಳೆ ನಾಲ್ಕು ಹುಡುಗಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಬಾಲಕಿಯರೆಲ್ಲರೂ 6-10 ವರ್ಷ ವಯಸ್ಸಿನವರಾಗಿದ್ದು, ಅವರ ಮತ್ತು ಅವರ ಪೋಷಕರ ದೂರಿನಂತೆ ನಿನ್ನೆ ಸಂಜೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಆಗಸ್ಟ್​​​ ಹಾಗೂ ನವೆಂಬರ್ ನಡುವೆ ಕಿರುಕುಳ ನೀಡಿದ್ದಾರೆ ಎಂದು ತನಿಖೆ ವೇಳೆ ಬಯಲಾಲಾಗಿದೆ.

ಈ ಬಗ್ಗೆ ಲಕ್ಷ್ಮೀದೇವ್‌ಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details