ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ ನಂತರವೂ ಪಕ್ಷಾಂತರ ಪರ್ವ ಮುಂದುವರೆದಿದೆ. ಇಂದು ಇಂಡಿಯನ್ ನ್ಯಾಷನಲ್ ಲೋಕ ದಳದ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಸಂಸದ ಎ.ಪಿ.ಅಬ್ದುಲ್ ಕುಟ್ಟಿ ಬಿಜೆಪಿ ಸೇರಿದ್ದಾರೆ.
ಬಿಜೆಪಿಗೆ ಟಿಡಿಪಿ, ಐಎನ್ಎಲ್ಡಿ ಮುಖಂಡರು... ನಡ್ಡಾ ಸಮ್ಮುಖದಲ್ಲಿ ಕಮಲಕ್ಕೆ ಸೇರ್ಪಡೆ! - ಬಿಜೆಪಿ
ದೇಶದಲ್ಲಿ ವಿವಿಧ ಪಕ್ಷಗಳ ಮುಖಂಡರ ಪಕ್ಷಾಂತರ ಪರ್ವ ಮುಂದುವರೆದಿದ್ದು, ಇವತ್ತು ಟಿಡಿಪಿ ಹಾಗೂ ಐಎನ್ಎಲ್ಡಿ ಪಕ್ಷದ ಪ್ರಮುಖಬರು ಬಿಜೆಪಿ ಸೇರಿದ್ದಾರೆ.
![ಬಿಜೆಪಿಗೆ ಟಿಡಿಪಿ, ಐಎನ್ಎಲ್ಡಿ ಮುಖಂಡರು... ನಡ್ಡಾ ಸಮ್ಮುಖದಲ್ಲಿ ಕಮಲಕ್ಕೆ ಸೇರ್ಪಡೆ!](https://etvbharatimages.akamaized.net/etvbharat/prod-images/768-512-3672962-thumbnail-3x2-wdfd.jpg)
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಕಮಲ ಮೂಡಿದಿದ್ದಾರೆ. ಇವರ ಜತೆ ಪಕ್ಷದ ಮುಖಂಡ ರಾಮ್ ಕುಮಾರ್ ಕಶ್ಯಪ್ ಕೂಡ ಇದ್ದರು. ಇದರ ಮಧ್ಯೆ ತೆಲಗು ದೇಶಂ ಪಕ್ಷದ ವಕ್ತಾರ ಲಂಕಾ ದಿನಕರ್ ಕೂಡ ಬಿಜೆಪಿ ಪಕ್ಷ ಸೇರಿದ್ದಾರೆ. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಇವರು ಕಮಲ ಮುಡಿದಿದ್ದಾರೆ.
ಈ ಹಿಂದೆ ಲಂಕಾ ದಿನಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಬಿಐಅನ್ನು ರಾಜಕೀಯ ವಿರೋಧಿಗಳ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದರು. ಇದರ ಮಧ್ಯೆ ಕಮಲಕ್ಕೆ ಜೈ ಎಂದಿದ್ದಾರೆ.