ನವದೆಹಲಿ:ದೇಶಾದ್ಯಂತ ಮುಂದಿನ ಎರಡು ವಾರಗಳ ಕಾಲ(ಮೇ.17) ಲಾಕ್ಡೌನ್ ಮುಂದೂಡಿಕೆಯಾಗಿದ್ದು, ಈಗಾಗಲೇ ದೇಶದಲ್ಲಿ ಯಾವ ರೀತಿಯಲ್ಲಿ ಕಾರ್ಯಸೂಚಿ ಇರಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರ ಮಾಹಿತಿ ಹೊರಹಾಕಿದೆ.
ಕೇಂದ್ರ ಗೃಹ ಸಚಿವಾಲಯ ಇದರ ಬಗ್ಗೆ ನಿನ್ನೆ ಆದೇಶ ಹೊರಹಾಕಿದ್ದು, ರೆಡ್,ಗ್ರೀನ್ ಹಾಗೂ ಆರೆಂಜ್ ವಲಯದಲ್ಲಿನ ಜನರು ಯಾವ ರೀತಿ ನಿಯಮ ಪಾಲನೆ ಮಾಡಬೇಕು ಎಂಬ ಮಾಹಿತಿ ನೀಡಿದೆ.ಇದರ ಮಧ್ಯೆ ಇದೀಗ ಆರೆಂಜ್ ಝೋನ್ ಜನರಿಗೆ ಮತ್ತಷ್ಟು ರಿಯಾಯಿತಿ ನೀಡಲಾಗಿದೆ.
ಆರೆಂಜ್ ಝೋನ್ಗಳಲ್ಲಿ ಬಸ್ ಸಂಚರಿಸಲು ಯಾವುದೇ ರಿಯಾಯತಿ ನೀಡಿಲ್ಲವಾದರೂ ಟ್ಯಾಕ್ಸಿ, ಕ್ಯಾಬ್ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಡ್ರೈವರ್ ಹಾಗೂ ಇಬ್ಬರು ಪ್ಯಾಸೆಂಜರ್ಗಳು ಪ್ರಯಾಣಿಸಬಹುದಾಗಿದೆ.
ಈಗಾಗಲೇ ಆರೆಂಜ್, ಗ್ರೀನ್ ಝೋನ್ಗಳಲ್ಲಿ ಬಾರ್ ಶಾಪ್ ಓಪನ್ ಮಾಡಲು ಅನುಮತಿ ನೀಡಲಾಗಿದ್ದು, ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯಕ ಎಂದು ಸರ್ಕಾರ ತಿಳಿಸಿದೆ. ಇದರ ಮಧ್ಯೆ ಮೂರು ಝೋನ್ಗಳಲ್ಲಿ ಆಸ್ಪತ್ರೆ ಒಪಿಡಿ ತೆರೆಯಲು ಅನುಮತಿ ನೀಡಲಾಗಿದ್ದು, ರೆಡ್ ಝೋನ್ಗಳಲ್ಲಿನ ಕಂಟೇನ್ಮೆಂಟ್ಗಳಲ್ಲಿ ಮಾತ್ರ ಈ ನಿಯಮ ಅನ್ವಯವಾಗುವುದಿಲ್ಲ.