ಕರ್ನಾಟಕ

karnataka

ETV Bharat / bharat

ಬಿಡ್​​ನಲ್ಲಿ Tata Airlines ಪಾಲಾಗಲಿದೆಯೇ ಏರ್​ ಇಂಡಿಯಾ? - ಟಾಟಾ ಸನ್ಸ್ ಖರೀದಿಸಬಹುದು

ಕೋವಿಡ್ -19 ಕ್ಕಿಂತ ಮುಂಚೆಯೇ ಏರ್ ಇಂಡಿಯಾ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಬಳಿಕ ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಂಪನಿಯ ಆರ್ಥಿಕ ಸ್ಥಿತಿ ನೆಲಕಚ್ಚಿದೆ. ಇದೀಗ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.

ಏರ್​ ಇಂಡಿಯಾ
ಏರ್​ ಇಂಡಿಯಾ

By

Published : Aug 16, 2020, 7:00 PM IST

ನವದೆಹಲಿ:ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ (Air India)ವನ್ನು ಖಾಸಗಿಯವರಿಗೆ ನೀಡುವ ಕುರಿತು ಕಳೆದ ಹಲವಾರು ತಿಂಗಳುಗಳಿಂದ ಚರ್ಚೆ ನಡೆದಿತ್ತು. ಆದರೆ ಈಗ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.

ಬಿಡ್​ಗೆ ಆ.31 ಕೊನೆಯ ದಿನವಾಗಿದ್ದು, ಈ ದಿನದೊಳಗೆ ಟಾಟಾ ಗ್ರೂಪ್​​ ಬಿಡ್ ಸಲ್ಲಿಸಲಿದೆ. ನಂತರ ಟಾಟಾ ಬಿಡ್ ಅಂಗೀಕರಿಸಲ್ಪಟ್ಟರೆ, 90 ದಿನಗಳ ಅವಧಿ ಅಂದರೇ ನವೆಂಬರ್ 30 ಅಥವಾ ಡಿಸೆಂಬರ್ 31 ರೊಳಗೆ ಹಸ್ತಾಂತರಿಸಲಾಗುತ್ತದೆ. ಜನವರಿ 1,2021 ರಿಂದ ಟಾಟಾ, ಏರ್ ಇಂಡಿಯಾದ ಮೇಲೆ ಹಿಡಿತ ಸಾಧಿಸುವ ಸಂಭವವಿದೆ.

ಈಗಾಗಲೇ ವಿಮಾನಯಾನ ವ್ಯವಹಾರದಲ್ಲಿ ಹೆಜ್ಜೆ ಗುರುತನ್ನು ಹೊಂದಿರುವ ಟಾಟಾ ಸಮೂಹವು ಏರ್ ಇಂಡಿಯಾವನ್ನು ಕೊಂಡುಕೊಳ್ಳಲು ಆಸಕ್ತಿ ತೋರಿಸಿದೆ. ಇದು ಒಂದು ಸಮಯದಲ್ಲಿ ಟಾಟಾ ಅಮ್ರೆಲ್ಲಾ ಅಡಿಯಲ್ಲಿತ್ತು.

ಇತರ ಬಿಡ್​ದಾರರ ಬಗ್ಗೆ ಇನ್ನೂ ತಿಳಿದಿಲ್ಲವಾದರೂ, ಟಾಟಾ ಏರ್ ಇಂಡಿಯಾದ ಏಕೈಕ ಬಿಡ್​ದಾರನಾಗಿ ಹೊರಹೊಮ್ಮುತ್ತದೆ ಎಂದು ನಂಬಲಾಗಿದೆ. ಸಾಫ್ಟ್ವೇರ್ ಸಂಘಟನೆಗೆ ಆಗಸ್ಟ್. 31 ರ ಒಳಗೆ ಬಿಡ್ ನೀಡುವ ಸಾಧ್ಯತೆಯಿದೆ. ಇದು ಏರ್ ಇಂಡಿಯಾದ ಬಿಡ್​ಗೆ ಕೊನೆಯ ದಿನಾಂಕವಾಗಿದೆ, ಇದನ್ನು ವಿಸ್ತರಿಸಲಾಗುವುದಿಲ್ಲ ಎಂದು ಸರ್ಕಾರ ಪದೇ ಪದೇ ಹೇಳಿದೆ.

ಕೋವಿಡ್ -19 ಕ್ಕಿಂತ ಮುಂಚೆಯೇ ಏರ್ ಇಂಡಿಯಾ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಂಪನಿಯ ಆರ್ಥಿಕ ಸ್ಥಿತಿ ನೆಲಕಚ್ಚಿದೆ. ವಿಶೇಷವಾಗಿ ವಾಯುಯಾನ ಕ್ಷೇತ್ರದಲ್ಲಿ ಮತ್ತು ಅದರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಟಾಟಾ ಸಮೂಹವು ಟಾಟಾ ಏರ್ಲೈನ್ಸ್ ಮತ್ತು ಏರ್ ಇಂಡಿಯಾದಿಂದ ವಿಸ್ತಾರ ಮತ್ತು ಏರ್ ಏಷ್ಯಾ ಇಂಡಿಯಾದವರೆಗೆ ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಾಯುಯಾನ ಕ್ಷೇತ್ರದ ಪ್ರಮುಖ ಭಾಗವಾಗಿದೆ.

ABOUT THE AUTHOR

...view details