ಚೆನ್ನೈ:ಕೊರೊನಾ ವಿರುದ್ಧ ಹೋರಾಟಕ್ಕೆ 1,500 ಕೋಟಿ ರೂ. ದೇಣಿಗೆ ನೀಡಿರುವ ಭಾರತದ ದಿಗ್ಗಜ ಕಂಪನಿ ಟಾಟಾ ಗ್ರೂಪ್ ತನ್ನ ಸಮಾಜ ಸೇವೆಯನ್ನು ಮುಂದುವರೆಸಿದ್ದು, 40,032 ಪಿಸಿಆರ್ ಪರೀಕ್ಷಾ ಕಿಟ್‌ಗಳನ್ನು ದೇಣಿಗೆಯಾಗಿ ನೀಡಿದೆ.
ಕೊರೊನಾ ಪತ್ತೆ ಹಚ್ಚಲು ತಮಿಳುನಾಡಿಗೆ 40 ಸಾವಿರ ಟೆಸ್ಟ್ ಕಿಟ್ ನೀಡಿದ ಟಾಟಾ ಗ್ರೂಪ್ - ಟಾಟಾ ಸಂಸ್ಥೆ ಲೇಟೆಸ್ಟ್ ನ್ಯೂಸ್
ಕೊರೊನಾ ಸೋಂಕು ಪತ್ತೆ ಹಚ್ಚುವ 40,032 ಪಿಸಿಆರ್ ಪರೀಕ್ಷಾ ಕಿಟ್‌ಗಳನ್ನು ಟಾಟಾ ಸಂಸ್ಥೆ ತಮಿಳುನಾಡು ರಾಜ್ಯಕ್ಕೆ ನೀಡಿದೆ.

40 ಸಾವಿರ ಟೆಸ್ಟ್ ಕಿಟ್ ದಾನ ಮಾಡಿದ ಟಾಟಾ ಗ್ರೂಪ್
ಕೊರೊನಾ ಸೋಂಕು ಪತ್ತೆ ಹಚ್ಚಲು ಟಾಟಾ ಗ್ರೂಪ್ 8 ಕೋಟಿ ರೂಪಾಯಿ ಮೌಲ್ಯದ ಸುಮಾರು 40,032 ಪಿಸಿಆರ್ ಪರೀಕ್ಷಾ ಕಿಟ್‌ಗಳನ್ನು ತಮಿಳುನಾಡು ಸರ್ಕಾರಕ್ಕೆ ನೀಡಿದೆ ಎಂದು ಸರ್ಕಾರಿ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ತಮಿಳುನಾಡು ರಾಜ್ಯಕ್ಕೆ ಪರೀಕ್ಷಾ ಕಿಟ್ ನೀಡಿದ ಟಾಟಾ ಸಮೂಹಕ್ಕೆ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಧನ್ಯವಾದ ಹೇಳಿದ್ದಾರೆ.