ಕರ್ನಾಟಕ

karnataka

ETV Bharat / bharat

ಸಕಲ ಸರ್ಕಾರಿ ಗೌರವಗಳೊಂದಿಗೆ ತರುಣ್​ ಗೋಗೊಯ್ ಅಂತ್ಯಕ್ರಿಯೆ - ಗುಹಾವಟಿಯಲ್ಲಿ ತರುಣ್​ ಗೊಗೊಯ್ ಅಂತ್ಯಕ್ರಿಯೆ

ಕೋವಿಡ್​ನಿಂದ ನಿಧನರಾದ ಅಸ್ಸೋಂ ಮಾಜಿ ಸಿಎಂ ತರುಣ್ ಗೋಗೊಯ್ ಅಂತ್ಯಕ್ರಿಯೆಯನ್ನು ಗುವಾಹಟಿಯಲ್ಲಿ ನಡೆಸಲಾಯಿತು.

Tarun Gogoi cremated with full state honours
ಸಕಲ ಸರ್ಕಾರಿ ಗೌರವಗಳೊಂದಿಗೆ ತರುಣ್​ ಗೊಗೊಯ್ ಅಂತ್ಯಕ್ರಿಯೆ

By

Published : Nov 26, 2020, 10:21 PM IST

ಗುವಾಹಟಿ: ಅಸ್ಸೋಂನ ಮಾಜಿ ಮುಖ್ಯಮಂತ್ರಿ ತರುಣ್ ಗೋಗೊಯ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಬಗ್ರಹ ಮೈದಾನದಲ್ಲಿ ನಡೆಸಲಾಯಿತು.

ಮಂತ್ರಘೋಷಗಳ ಪಠಣ, ಅಸ್ಸೋಂ ಪೊಲೀಸರ ಗನ್​ ಸೆಲ್ಯೂಟ್​ನೊಂದಿಗೆ ಸುದೀರ್ಘ ಸಮಯ ರಾಜ್ಯವನ್ನು ಮುನ್ನಡೆಸಿದ ಗೋಗೊಯ್​ಗೆ ಜನ ವಿದಾಯ ಹೇಳಿದರು. ತರುಣ್ ಗೋಗೊಯ್ ಅವರ ಮಗ ಗೌರವ್​ ಗೋಗೊಯ್ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಗೋಗೊಯ್ ಅವರ ಪತ್ನಿ ಡಾಲಿ, ಮಗಳು ಚಂದ್ರಿಮಾ, ಸೊಸೆ ಎಲಿಜಬೆತ್ ಮತ್ತು ಕುಟುಂಬದ ಇತರ ಸದಸ್ಯರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

ಮೂರು ಬಾರಿ ಮುಖ್ಯಮಂತ್ರಿ, ಎರಡು ಬಾರಿ ಕೇಂದ್ರ ಸಚಿವ ಮತ್ತು ಆರು ಬಾರಿ ಸಂಸದರಾಗಿದ್ದ 84 ವರ್ಷದ ತರುಣ್​ ಗೋಗೊಯ್​, ನಾಲ್ಕು ತಿಂಗಳ ಅನಾರೋಗ್ಯದ ಬಳಿಕ ಕಳೆದ ಸೋಮವಾರ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು.

For All Latest Updates

ABOUT THE AUTHOR

...view details