ನವದೆಹಲಿ:ಸಿಎಎ ಮತ್ತು ಎನ್ಆರ್ಸಿ ವಿಚಾರದಲ್ಲಿ ಪಾಕಿಸ್ತಾನ ಮೂಲದ ಐಎಸ್‌ಐ, ಭಾರತದಲ್ಲಿ ಅಶಾಂತಿ ಸೃಷ್ಟಿಸಿದೆ ಎಂದು ಪಾಕಿಸ್ತಾನ ಮೂಲದ ಕೆನಡಾದ ಲೇಖಕ ತಾರೆಕ್ ಫತೇಹ್ ಹೇಳಿದ್ದಾರೆ.
ಸಾಹಿತ್ಯ ಕಾರ್ಯಕ್ರಮಕ್ಕಾಗಿ ಇಂದೋರ್ಗೆ ಆಗಮಿಸಿ ಮಾತನಾಡಿದ ಅವರು, ಸಿಎಎ ಬಗ್ಗೆ ಪ್ರತಿಭಟಿಸುವ ಜನರು ಸುಳ್ಳು ಹೇಳುತ್ತಿದ್ದಾರೆ. ಒಂದು ವೇಳೆ ಹಾಗಾಗಿದ್ದರೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ದೆಹಲಿಯಲ್ಲಿ ಇರುತ್ತಿರಲಿಲ್ಲ. ಅಲ್ಲಾ-ಹು-ಅಕ್ಬರ್ ಅವರ ಲಾಂಛನದಲ್ಲಿ ಇರುತ್ತಿರಲಿಲ್ಲ ಎಂದು ಹೊಸದಾಗಿ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾನೂನು ನಂತರ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದರು.
ಈ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾದ್ದು ಭಾರತೀಯ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಲಾಗಿದೆ. ಆದ್ದರಿಂದ ನಡೆಯುತ್ತಿರುವ ಅವ್ಯವಸ್ಥೆ ಸಿಎಎಗೆ ಸಂಬಂಧಿಸಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತಾರೆಕ್ ಫತೇಹ್, ಪಾಕಿಸ್ತಾನ ಮೂಲದ ಕೆನಡಾ ಲೇಖಕ ಪಾಕಿಸ್ತಾನದ ಐಎಸ್‌ಐ, ಉಗ್ರಗಾಮಿಗಳು, ಜಾಮಿಯಾ ಮಿಲಿಯಾ ಮತ್ತು ಅಲಿಘರ್ ವಿಶ್ವವಿದ್ಯಾಲಯದಲ್ಲಿ ಕುಳಿತಿರುವ ಜನರಿಂದ ಈ ಸಮಸ್ಯೆಗಳು ಉದ್ಭವಿಸಿವೆ ಎಂದು ಫತೇಹ್ ಹೇಳಿದ್ದಾರೆ. ಜಾತ್ಯತೀತತೆ ಮತ್ತು ಸಮಾನತೆಯ ವಾಸ್ತವತೆಯನ್ನು ಅವರು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಒಪ್ಪಿಕೊಂಡರೆ ಮುಸ್ಲಿಮರಿಗೆ 50% ಮೀಸಲಾತಿ ಇರುವುದಿಲ್ಲ ಎಂದು ಫತೇಹ್ ಟೀಕಿಸಿದ್ದಾರೆ.
ನಗರ ನಕ್ಸಲರು ಹಣ ಹೊಂದಿರುವ ಕಮ್ಯುನಿಸ್ಟರು, ಮಿಲಿಯನೇರ್ ಮಾರ್ಕ್ಸ್ವಾದಿಗಳು ಸಿಎಎನಲ್ಲಿರುವ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲು ಯಾವುದೇ ಪುಸ್ತಕ ಅಥವಾ ಕಾನೂನನ್ನು ಓದಿಲ್ಲ. ಒಮ್ಮೆ ನೀವು ಭಾರತದಿಂದ ಹೊರಗುಳಿದ ಇಸ್ಲಾಮಿಕ್ ದೇಶದವಾರಾಗಿದ್ದರೆ ಮುಸ್ಲಿಮರು ಭಾರತಕ್ಕೆ ಹಿಂತಿರುಗಲು ಏಕೆ ಬಯಸುತ್ತಾರೆ? ಭಾರತೀಯ ಸಮಾಜದ ಮೇಲಿನ ವೀಟೋವನ್ನು ಇದ್ದಕ್ಕಿದ್ದಂತೆ ತೆಗೆದುಕೊಂಡು ಹೋಗಲಾಗಿದೆ ಎಂದು ಅವರು ಅರಿತುಕೊಂಡಿದ್ದಾರೆ ಎಂದಿದ್ದಾರೆ.
ಸಿಎಎಯಿಂದ ಭಾರತವು ಹಿಂದೂ ರಾಷ್ಟ್ರವಾಗಲಿದೆ. ಭಾರತವಲ್ಲದೆ ಮತ್ಯಾವ ದೇಶ ಹಿಂದೂ ರಾಷ್ಟ್ರವಾಗಿ ಬದಲಾಗಬೇಕು ನೀವೇ ಹೇಳಿ ಎಂದು ತಾರೆಕ್ ಫತೇಹ್ ಪ್ರಶ್ನಿಸಿದ್ದಾರೆ.