ಮಧುರೈ (ತಮಿಳುನಾಡು):ವೈದ್ಯಕೀಯ ಅಧ್ಯಯನದ ಅರ್ಹತಾ ಪರೀಕ್ಷೆ ನೀಟ್ನಲ್ಲಿ ಪಾಸ್ ಆಗುವುದಿಲ್ಲ ಎಂಬ ಭಯದಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜ್ಯೋತಿ ಶ್ರೀ ದುರ್ಗಾ (19) ಮಧುರೈನ ತನ್ನ ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಪರೀಕ್ಷೆಗೆ ಒಂದು ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಲ್ಲಕುಲಂನಲ್ಲಿರುವ ಆಕೆಯ ಮನೆಯಲ್ಲಿ ಪತ್ತೆಯಾದ ಆತ್ಮಹತ್ಯೆ ಪತ್ರದಲ್ಲಿ, "ನನ್ನ ಕುಟುಂಬವು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ ಮತ್ತು ನನಗೆ ಆದ್ಯತೆಯ ಕಾಲೇಜಿನಲ್ಲಿ ಸ್ಥಾನ ಸಿಗದಿದ್ದರೆ, ಕುಟುಂಬದ ಕಠಿಣ ಪರಿಶ್ರಮ ವ್ಯರ್ಥವಾಗುತ್ತದೆ ಕ್ಷಮಿಸಿ" ಎಂದು ಬರೆದಿದ್ದಾಳೆ.
ಆಕೆಯ ತಂದೆ ಮುರುಗ ಸುಂದರಂ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ಕಳೆದ ಒಂದು ವಾರದಿಂದ ದುರ್ಗಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದರಿಂದ ಕಳೆದ ವರ್ಷ ದಾಖಲಾಗಲು ಅವಳು ವಿಫಲಳಾಗಿದ್ದಳು. ಮಧುರೈ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.