ತಿರುವಳ್ಳೂರು:ಚಿಕನ್ ಪ್ರೀಯರಿಗೆ ಬಿರಿಯಾನಿ ಅಂದ್ರೆ ಪಂಚಪ್ರಾಣ. ಅದರಲ್ಲೂ ಕೇವಲ 1 ರೂಪಾಯಿಗೆ ಮಾರಾಟ ಮಾಡಿದ್ರೆ ಮಾಂಸಹಾರಿಗಳ ಸಂತೋಷಕ್ಕೆ ಪಾರವೇ ಇರಲ್ಲ. ತಮಿಳುನಾಡಿನಲ್ಲಿ ಹೊಸದಾಗಿ ಆರಂಭಗೊಂಡಿರುವ ಹೋಟೆಲ್ವೊಂದರಲ್ಲಿ ಕೇವಲ 1 ರೂಪಾಯಿಗೆ ಚಿಕನ್ ಬಿರಿಯಾನಿ ನೀಡಿದ್ದಾರೆ.
1 ರೂಪಾಯಿಗೆ ಹೊಟ್ಟೆ ಬಿರಿಯುವಷ್ಟು ಬಿರಿಯಾನಿ: ಮುಗಿಬಿದ್ದು ಚಪ್ಪರಿಸಿ ತಿಂದ ಗ್ರಾಹಕರು
ಬಿರಿಯಾನಿ ಎಂದರೆ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ನಾವು ಊಹೆ ಮಾಡಿರುವ ಬೆಲೆಗಿಂತಲೂ ಕಡಿಮೆ ಹಣಕ್ಕೆ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು.
Tamil Nadu restaurant offers Biryani for Rs 1
ಇಲ್ಲಿನ ತಿರುವಳ್ಳೂರುನಲ್ಲಿ ಹೊಸದಾಗಿ ಆರಂಭಗೊಂಡಿರುವ ಹೋಟೆಲ್ನಲ್ಲಿ ಈ ಆಫರ್ ನೀಡಲಾಗಿದೆ.ಇದರ ಮಾಹಿತಿ ಗೊತ್ತಾಗುತ್ತಿದ್ದಂತೆ ಚಿಕನ್ ಸವಿಯುವುದಕ್ಕೆ ತಾ ಮುಂದು, ನಾ ಮುಂದು ಎಂದು ಮುಗಿಬಿದ್ದಿದ್ದಾರೆ. ಹೋಟೆಲ್ ಉದ್ಘಾಟನೆ ಮಾಡಿದ ದಿನ ಮಾತ್ರ ಈ ಆಫರ್ ನೀಡಿರುವುದು ವಿಶೇಷ.