ತಮಿಳುನಾಡು/ಆಂಧ್ರಪ್ರದೇಶ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಅಂತಾರಾಜ್ಯ ಸಾರ್ವಜನಿಕರ ಸಂಚಾರ ತಡೆಗಟ್ಟುವ ಸಲುವಾಗಿ ತಮಿಳುನಾಡು ಪೊಲೀಸರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಯಾರೂ ಸಂಚರಿಸದಂತೆ ಗೋಡೆಗಳನ್ನು ನಿರ್ಮಿಸಿದ್ದಾರೆ.
ಕೊರೊನಾ ಭೀತಿ: ಅಂತಾರಾಜ್ಯ ಸಂಚಾರ ತಡೆಗೆ ಗಡಿಗೋಡೆ ನಿರ್ಮಾಣ! - ತಮಿಳುನಾಡು ಪೊಲೀಸರು ಆಂಧ್ರದ ಗಡಿ
ಆಂಧ್ರ ಮತ್ತು ತಮಿಳುನಾಡು ಗಡಿಯಲ್ಲಿ ಸಾರ್ವಜನಿಕರ ಸಂಚಾರವನ್ನು ತಡೆಗಟ್ಟುವ ಸಲುವಾಗಿ, ತಮಿಳುನಾಡು ಪೊಲೀಸರು ಆಂಧ್ರದ ಗಡಿಯಲ್ಲಿ ಗೋಡೆಯನ್ನು ನಿರ್ಮಿಸಿದ್ದಾರೆ.
ಅಂತರ್ರಾಜ್ಯ ಸಂಚಾರ ನಿರ್ಬಂಧಿಸಲು ಗಡಿಯಲ್ಲಿ ಗೋಡೆ ನಿರ್ಮಾಣ
ಪಾಲಮನೇರು, ಗುಡಿಯತ್ತಂ, ಶೆಟ್ಟಿಡಂಗಲ್ ಸೇರಿದಂತೆ ಅಂತರ್ರಾಜ್ಯ ಗಡಿ ಪ್ರದೇಶಗಳ ಪ್ರವೇಶಿಸುವ ಮತ್ತು ನಿರ್ಗಮಿಸುವ ಸ್ಥಳಗಳಲ್ಲಿ ಮೂರು ಅಡಿಗಳಷ್ಟು ಎತ್ತರಕ್ಕೆ ಗೋಡೆಯನ್ನು ನಿರ್ಮಿಸಿದ್ದಾರೆ.
ಗೋಡೆಗಳ ನಿರ್ಮಾಣದಿಂದ ಈ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರಿಗೆ ಅನಾನುಕೂಲ ಉಂಟಾಗಲಿದೆ ಎಂದು ಜಿಲ್ಲಾ ಮತ್ತು ಮಂಡಲ್ ಅಧಿಕಾರಿಗಳು ಆರೋಪಿಸಿದ್ದಾರೆ.
Last Updated : Apr 27, 2020, 6:40 PM IST