ಚೆನ್ನೈ: ಪ್ರತಿ ದಿನ 400 ಪರೋಟಾ ಮಾಡಿ ಚೀನಾದ ಪ್ರಸಿದ್ಧ ಹೋಟೆಲ್ನಲ್ಲಿದ್ದ ಲಕ್ಷಕ್ಕೂ ಅಧಿಕ ಹಣ ಸಂಪಾದಿಸುತ್ತಿದ್ದ ವ್ಯಕ್ತಿಯೋರ್ವ ಇದೀಗ ಕೋವಿಡ್-19 ಕಾರಣ ಭಾರತಕ್ಕೆ ವಾಪಸ್ ಆಗಿದ್ದು, ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾನೆ.
ಚೀನಾದಲ್ಲಿ ತಿಂಗಳಿಗೆ ಲಕ್ಷ ಸಂಪಾದಿಸುತ್ತಿದ್ದ ವ್ಯಕ್ತಿ ಭಾರತಕ್ಕೆ ಬಂದು 4 ಸಾವಿರ ರೂ. ದುಡಿಮೆ! - ಕೋವಿಡ್-19
ಚೀನಾದ ಹೋಟೆಲ್ವೊಂದರಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ ಕೊರೊನಾ ಕಾರಣ ಭಾರತಕ್ಕೆ ವಾಪಸ್ ಆಗಿದ್ದು, ಇದೀಗ ಜೀವನೋಪಾಯಕ್ಕಾಗಿ ಆಟೋ ರಿಕ್ಷಾ ಓಡಿಸುತ್ತಿದ್ದಾನೆ.
Tamil Nadu man
ಚೀನಾದಲ್ಲಿ ಕೊರೊನಾ ಅಬ್ಬರ ಜೋರಾಗುತ್ತಿದ್ದಂತೆ ಭಾರತಕ್ಕೆ ವಾಪಸ್ ಆಗಿರುವ ತಮಿಳುನಾಡಿನ ಪುಲ್ಲಿಯೂರ್ನ ವ್ಯಕ್ತಿ ಮೋಹನದಾಸ್, ಇದೀಗ ಜೀವನೋಪಾಯಕ್ಕಾಗಿ ಬೇರೆ ದಾರಿ ಕಾಣದೆ ಆಟೋ ರಿಕ್ಷಾ ಓಡಿಸುತ್ತಿದ್ದಾನೆ.
ಚೀನಾದಲ್ಲಿದ್ದ ವೇಳೆ ಪ್ರತಿ ತಿಂಗಳು 1 ಲಕ್ಷ ರೂ. ಹಣ ಸಂಪಾದನೆ ಮಾಡ್ತಿದ್ದ ವ್ಯಕ್ತಿ ಇದೀಗ 4 ಸಾವಿರ ರೂ. ದುಡಿಯುತ್ತಿರುವುದಾಗಿ ಹೇಳಿದ್ದಾನೆ. ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಹೋಟೆಲ್ ಸೇರಿದಂತೆ ಅನೇಕ ವ್ಯಾಪಾರ ವಹಿವಾಟು ಕುಸಿತ ಕಂಡಿದೆ. ಹೀಗಾಗಿ ಸಾವಿರಾರು ಜನರು ಕೆಲಸ ಕೂಡ ಕಳೆದುಕೊಂಡಿದ್ದಾರೆ.