ತಿರುನೆಲ್ವೇಲಿ(ತಮಿಳುನಾಡು):ಗುಜರಾತ್ನ ಸೂರತ್‌ನಲ್ಲಿ ಉಪಾಹಾರ ಗೃಹದಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಕಾರ್ಮಿಕನೊಬ್ಬನ ಮೃತದೇಹವನ್ನು ತರಿಸಿಕೊಳ್ಳುವಲ್ಲಿ ಜಿಲ್ಲಾಡಳಿತ ಕುಟುಂಬಕ್ಕೆ ನೆರವಾಗಿದೆ.
ಗುಜರಾತ್ನಲ್ಲಿ ತಮಿಳುನಾಡಿನ ವ್ಯಕ್ತಿ ಸಾವು: ಮೃತದೇಹ ತರಲು ಕುಟುಂಬಕ್ಕೆ ನೆರವಾದ ಜಿಲ್ಲಾಡಳಿತ - ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್
ಗುಜರಾತ್ನ ಸೂರತ್‌ನಲ್ಲಿ ಉಪಾಹಾರ ಗೃಹದಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಕಾರ್ಮಿಕನೊಬ್ಬನ ಮೃತದೇಹವನ್ನು ತರಿಸಿಕೊಳ್ಳುವಲ್ಲಿ ಜಿಲ್ಲಾಡಳಿತ ಕುಟುಂಬಕ್ಕೆ ನೆರವಾಗಿದೆ.
ತಿರುನೆಲ್ವೇಲಿ ಪಟ್ಟಣದ ನಿವಾಸಿ ಸುಬ್ಬರಾಜ್ (58) 15 ವರ್ಷಗಳಿಂದ ಸೂರತ್‌ನ ಉಪಾಹಾರ ಗೃಹದಲ್ಲಿ ಕೆಲಸ ಮಾಡುತ್ತಿದ್ದ. ಏಪ್ರಿಲ್ 12ರಂದು ಅವರು ಸೂರತ್‌ನ ಆಸ್ಪತ್ರೆಯಲ್ಲಿ ಅನಾರೋಗ್ಯ ಹಿನ್ನೆಲೆ ನಿಧನರಾದರು. ಮೃತಪಟ್ಟ ವ್ಯಕ್ತಿಯ ಪತ್ನಿ ರಂಗನಾಕಿಗೆ ಲಾಕ್ಡೌನ್ ಪರಿಸ್ಥಿತಿಯಲ್ಲಿ ಗಂಡನ ಮೃತದೇಹವನ್ನು ಹೇಗೆ ಮರಳಿ ತರಿಸುವುದು ಎಂಬುದರ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಈ ಹಿನ್ನೆಲೆ ಅವರು ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರ ಮೊರೆ ಹೋದರು.
ಇನ್ನು ಕುಟುಂಬದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಹಾಯಕ ಸಂಗ್ರಾಹಕ ಶಿವಗುರು ಪ್ರಭಾಕರನ್ ಅವರಿಗೆ ಕುಟುಂಬಕ್ಕೆ ಮೃತದೇಹ ತರಿಸಿಕೊಳ್ಳಲು ಸಹಾಯ ಮಾಡುವಂತೆ ಸೂಚಿಸಿದರು. ಜಿಲ್ಲಾಧಿಕಾರಿಯ ಆದೇಶದಂತೆ ಮತ್ತು ಸೂರತ್ ಜಿಲ್ಲಾಡಳಿತದ ಸಹಾಯದಿಂದ ಮೃತದೇಹ ತರಲಾಗಿದೆ. ಸುಮಾರು 4,000 ಕಿ.ಮೀ. ದೂರ ಕ್ರಮಿಸಿ, ನಾಲ್ಕು ದಿನಗಳ ಪ್ರಯಾಣ ಮಾಡಿ ಮೃತದೇಹ ತರಲಾಗಿದೆ.