ಕರ್ನಾಟಕ

karnataka

ETV Bharat / bharat

ವೈದ್ಯಕೀಯ ಕೋರ್ಸ್‌ಗಳಲ್ಲಿ OBCಗೆ 27 ರಷ್ಟು ಮೀಸಲು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ - ಒಬಿಸಿಗೆ 27 ರಷ್ಟು ಮೀಸಲಾತಿ

ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶದಲ್ಲಿ ಒಬಿಸಿಗೆ 27 ರಷ್ಟು ಮೀಸಲಾತಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

seeking 27% OBC reservation in medical courses
OBCಗೆ 27 ರಷ್ಟು ಮೀಸಲಾತಿ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ

By

Published : May 29, 2020, 4:37 PM IST

ನವದೆಹಲಿ:ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27 ರಷ್ಟು ಮೀಸಲಾತಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ಅಖಿಲ ಭಾರತ ಕೋಟಾ ಅಡಿ ಸರ್ಕಾರ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲು ಒದಗಿಸುವಂತೆ ತಮಿಳುನಾಡು ಪಟ್ಟಾಲಿ ಮಕ್ಕಲ್ ಕಚ್ಚಿ ಪಕ್ಷದ ಮುಖಂಡ ಡಾ.ಅನ್ಬುಮಣಿ ರಾಮದಾಸ್ ಅವರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ.

ಕೇಂದ್ರ ಸೇವೆಗಳು ಮತ್ತು ಸಾರ್ವಜನಿಕ ಉದ್ಯಮಗಳಲ್ಲಿನ ಉದ್ಯೋಗಗಳಿಗಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇಕಡಾ 27 ರಷ್ಟು ಮೀಸಲಾತಿಯನ್ನು ನೀಡಲಾಗುವುದು ಎಂದು 1990ರ ಆಗಸ್ಟ್ 13 ರಂದು ಭಾರತೀಯ ಸರ್ಕಾರ ಘೋಷಿಸಿತ್ತು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

2017-18, 2018-19 ಮತ್ತು 2019-20ರ ಶೈಕ್ಷಣಿಕ ವರ್ಷಗಳಲ್ಲಿ ಅಖಿಲ ಭಾರತ ಕೋಟಾವನ್ನು ಒದಗಿಸಲಾಗಿಲ್ಲ ಎಂದು ರಾಮದಾಸ್ ಹೇಳಿದ್ದಾರೆ. 2018-19ರಲ್ಲಿ ಕೇವಲ 220 ಒಬಿಸಿ ಅಭ್ಯರ್ಥಿಗಳನ್ನು ಮಾತ್ರ ಸ್ನಾತಕೋತ್ತರ ಕೋರ್ಸ್‌ಗಳಿಗೆ ದಾಖಲಿಸಲಾಗಿದ್ದು, 7,982 ಸ್ಥಾನಗಳಲ್ಲಿ 2,152 ಕ್ಕಿಂತ ಹೆಚ್ಚು ಸ್ಥಾನಗಳು ಲಭ್ಯವಿದ್ದವು. ಅದೇ ರೀತಿ ಅಖಿಲ ಭಾರತ ಕೋಟಾ ಅಡಿಯಲ್ಲಿ ಕೇವಲ 66 ಒಬಿಸಿ ವಿದ್ಯಾರ್ಥಿಗಳು ಮಾತ್ರ ಪದವಿ ಕೋರ್ಸ್‌ಗೆ (ಎಂಬಿಬಿಎಸ್) ಪ್ರವೇಶಿ ಪಡೆದಿದ್ದಾರೆ ಎಂದಿದ್ದಾರೆ.

ABOUT THE AUTHOR

...view details