ಚೆನ್ನೈ(ತಮಿಳನಾಡು) : ಟ್ವಿಟರ್ನಲ್ಲಿ ಒಂದು ಫೋಟೋ ಹರಿದಾಡುತ್ತಿದೆ. ಅರಣ್ಯ ರಕ್ಷಕ ಸಿಬ್ಬಂದಿಯೊಬ್ಬರು ಆನೆಯ ಮರಿಯನ್ನು ತನ್ನ ಹೊತ್ತುಕೊಂಡು ಹೋಗುವ ಫೋಟೋ ಇದಾಗಿದ್ದು ಟ್ವಿಟರ್ನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನು ಭಾರತೀಯ ಅರಣ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀಪಿಕಾ ಬಾಜಪೈ ಎಂಬುವರು ಈ ಟ್ವೀಟ್ ಮಾಡಿದ್ದು, ಟ್ವೀಟಿಗರಿಂದ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ.
ಇದು ಭುಜಬಲ ಪರಾಕ್ರಮ: ಮರಿಯಾನೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ 'ಬಲ ಭೀಮ'!
ವ್ಯಕ್ತಿಯೋರ್ವ ಆನೆ ಮರಿಯೊಂದನ್ನು ತನ್ನ ಭುಜದ ಮೇಲೆ ಹೊತ್ತು ತನ್ನ ತಾಯಿ ಆನೆ ಬಳಿ ಸೇರಿಸಿದ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆನೆ ಮರಿ ರಕ್ಷಣೆ
ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, ಪಳನಿಚಾಮಿ ಶರತ್ಕುಮಾರ್ ಎಂಬ ಅರಣ್ಯ ರಕ್ಷಕ ಗುಂಡಿಯೊಳಗೆ ಬಿದ್ದಿದ್ದ ಆನೆ ಮರಿಯನ್ನು ರಕ್ಷಿಸಿ, ತನ್ನ ಭುಜಗಳ ಮೇಲೆ ಹೊತ್ತೊಯ್ದು ತಾಯಿ ಆನೆಯ ಬಳಿ ಸೇರಿಸಿದ ಎಂದು ಈ ಟ್ವಿಟರ್ನಲ್ಲಿ ಅವರು ಬರೆದುಕೊಂಡಿದ್ದಾರೆ.
2017ರ ಡಿಸೆಂಬರ್ ಈ ಘಟನೆ ನಡೆದಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಹವಾ ಸೃಷ್ಟಿಸಿದೆ. ಸುಮಾರು ನೂರು ಕೆ.ಜಿ ಇದ್ದ ಆನೆ ಮರಿಯೊಂದನ್ನು ಗುಂಡಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.