ಕರ್ನಾಟಕ

karnataka

ETV Bharat / bharat

ಕಾವೇರಿ ಜಲಾನಯನ ಪ್ರದೇಶ 'ಸಂರಕ್ಷಿತ ಕೃಷಿ ವಲಯ'ವೆಂದು ಘೋಷಿಸಿದ ತಮಿಳುನಾಡು - ಸಂರಕ್ಷಿತ ಕೃಷಿ ವಲಯ

ಕಾವೇರಿ ಜಲಾನಯನ ಪ್ರದೇಶವನ್ನ ಸಂರಕ್ಷಿತ ಕೃಷಿ ವಲಯ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆಗೆ ಸಂಬಂಧಿಸಿದ ಯೋಜನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.

Tamil Nadu CM declares Cauvery delta 'protected agricultural zone,ಕಾವೇರಿ ಜಲಾನಯನ ಪ್ರದೇಶ ಸಂರಕ್ಷಿತ ಕೃಷಿ ವಲಯ
ಪಳನಿಸ್ವಾಮಿ

By

Published : Feb 9, 2020, 7:36 PM IST

Updated : Feb 9, 2020, 7:50 PM IST

ಸೇಲಂ(ತಮಿಳುನಾಡು): ಕಾವೇರಿ ಜಲಾನಯನ ಪ್ರದೇಶವನ್ನ ಸಂರಕ್ಷಿತ ಕೃಷಿ ವಲಯ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆಗೆ ಸಂಬಂಧಿಸಿದ ಯೋಜನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಹೇಳಿದ್ದಾರೆ.

ಕಳೆದ ವರ್ಷ, ಕೇಂದ್ರ ಸರ್ಕಾರವು ಕಾವೇರಿ ಜಲಾನಯನ ಪ್ರದೇಶದಲ್ಲಿ ತೈಲ ಮತ್ತು ಅನಿಲ ಪರಿಶೋಧನೆ ಯೋಜನೆಗೆ ಅನುಮತಿ ನೀಡಿತ್ತು. ಆದರೆ ರಾಜ್ಯದಲ್ಲಿ ನೀರಿನ ಸಮಸ್ಯೆ ಇದೆ ಈ ಯೋಜನೆಗೆ ಅವಕಾಶ ನೀಡಬಾರದು ಎಂದು ಜನರು ಬೀದಿಗಳಿದು ಪ್ರತಿಭಟನೆ ನಡೆಸಿದ್ದರು.

ನಾವು ಕಾವೇರಿ ಜಲಾನಯನ ಪ್ರದೇಶವನ್ನ ಸಂರಕ್ಷಿತ ಕೃಷಿ ವಲಯವೆಂದು ಘೋಷಿಸಲಾಗಿದೆ. ಈ ಬಗ್ಗೆ ವಿಶೇಷ ಕಾನೂನು ತರಲು ನಾವು ಕಾನೂನು ತಜ್ಞರೊಂದಿಗೆ ಮಾತನಾಡುತ್ತೇವೆ. ನಾನು ಸಿಎಂ ಆಗಿದ್ದರೂ, ಈ ಸಮಸ್ಯೆಯನ್ನು ರೈತನಾಗಿ ನೋಡುತ್ತಿದ್ದೇನೆ. ಹೈಡ್ರೋಕಾರ್ಬನ್ ಯೋಜನೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಪಳನಿಸ್ವಾಮಿ ಹೇಳಿದ್ದಾರೆ. ಸಂರಕ್ಷಿತ ಕೃಷಿ ವಲಯ ಎಂದು ಘೋಷಣೆ ಮಾಡಿದೆರೆ ಆ ಪ್ರದೇಶದಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿರುತ್ತದೆ.

Last Updated : Feb 9, 2020, 7:50 PM IST

ABOUT THE AUTHOR

...view details