ಕರ್ನಾಟಕ

karnataka

ETV Bharat / bharat

82ರ ಇಳಿ ವಯಸ್ಸಿನಲ್ಲೂ ಇಡ್ಲಿ ಮೇಕಿಂಗ್​...1ರೂಗೆ ಮಾರಾಟ ಮಾಡೋ ಅಜ್ಜಿ! - ಕೊಯಮತ್ತೂರು

82ರ ಇಳಿ ವಯಸ್ಸಿನಲ್ಲೂ ತಮಿಳುನಾಡಿನ ಅಜ್ಜಿಯೋರ್ವರು ಇಡ್ಲಿ ತಯಾರಿಸಿ ತಮ್ಮ ಜೀವನ ನಡೆಸುತ್ತಿದ್ದು, ಯುವ ಜನಾಂಗ ನಡೆಸುವಂತಹ ಕೆಲಸ ಮಾಡ್ತಿದ್ದಾರೆ.

82ರ ಇಳಿ ವಯಸ್ಸಿನಲ್ಲೂ ಇಡ್ಲಿ ಮೇಕಿಂಗ್

By

Published : Sep 14, 2019, 3:22 PM IST

ಕೊಯಮತ್ತೂರು: ಹರಯದೇ ವಯಸ್ಸಿನಲ್ಲೇ ಅನೇಕರು ತಮ್ಮ ಕೈಯಿಂದ ಇನ್ಮುಂದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮನೆಯಲ್ಲಿ ಕುಳಿತುಕೊಂಡು ಬಿಡ್ತಾರೆ. ಅದರೆ ಇಲ್ಲೊಬ್ಬ 82ರ ವಯಸ್ಸಿನ ಅಜ್ಜಿ ಪ್ರತಿದಿನ ಇಡ್ಲಿ ತಯಾರಿಸಿ ಜನರಿಗೆ ಕೇವಲ 1 ರೂ ಗೆ ಮಾರಾಟ ಸಹ ಮಾಡ್ತಾರೆ.

1 ರೂ.ಗೆ ಇಡ್ಲಿ ಮಾರುವ 80ರ ವೃದ್ಧೆಗೆ ಆನಂದ್​ ಮಹೀಂದ್ರ, ಕೇಂದ್ರ ಸಚಿವರ ಸೆಲ್ಯೂಟ್

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಡಿವೇಲಂಪಲಯಂ ಗ್ರಾಮದ 82 ವಯಸ್ಸಿನ ಎಂ ಕಮಲಥಾಲ್ ನಿತ್ಯ ಇಡ್ಲಿ ತಯಾರಿಸಿ ಅವುಗಳನ್ನ ಒಂದು ರೂಪಾಯಿಗೆ ಮಾರಾಟ ಮಾಡಿ, ತನ್ನ ಜೀವನ ನಡೆಸುತ್ತಿದ್ದಾಳೆ. ನಿತ್ಯ ಕಟ್ಟಿಗೆಯಿಂದಲೇ ಇಡ್ಲಿ ತಯಾರು ಮಾಡ್ತಿದ್ದ ವಿಡಿಯೋ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಅವರು ಇಡ್ಲಿ ಸಿದ್ಧಪಡಿಸಿ ಮಾರಾಟ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.

82ರ ಇಳಿ ವಯಸ್ಸಿನಲ್ಲೂ ಇಡ್ಲಿ ಮೇಕಿಂಗ್

ಈ ವೃದ್ಧೆಯ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅಧಿಕಾರಿಗಳು ಒಂದೇ ದಿನದಲ್ಲಿ ಎಲ್​ಪಿಜಿ ಸಂಪರ್ಕ ಕಲ್ಪಿಸಿಕೊಟ್ಟಿದ್ದರು. ಇದೀಗ ಸ್ಟೌವ್​ ಬಳಸಿ ಪ್ರತಿದಿನ 400 - 500 ಇಡ್ಲಿ ತಯಾರಿಸಿ ಅವುಗಳ ಮಾರಾಟ ಮಾಡುತ್ತಾ ಜೀವನ ಸಾಗಿಸ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಜ್ಜಿ, ಗೊತ್ತಿಲ್ಲ ಇದು ಎಷ್ಟು ದಿನ ಮುಂದುವರಿಯಲಿದೆ ಎಂಬುದು. ಆದರೆ ನನ್ನ ಜೊತೆ ಯಾರು ಇಲ್ಲ. ನಿತ್ಯ ಬೆಳಗ್ಗೆ 5.30ಕ್ಕೆ ಎದ್ದು ಮಧ್ಯಾಹ್ನ 12 ಗಂಟೆವರೆಗೆ ಈ ಕೆಲಸ ಮಾಡುತ್ತೇನೆ. ಇದರಿಂದ ನಾನು ಯಾವುದೇ ರೀತಿಯ ಲಾಭ ನಿರೀಕ್ಷೆ ಮಾಡ್ತಿಲ್ಲ. ಉಳಿಯುವ ಸ್ವಲ್ಪ ಹಣ ನನ್ನ ಜೀವನಕ್ಕೆ ಬಳಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details